2025-26ನೇ ಸಾಲಿನ ವೆಚ್ಚಕ್ಕಾಗಿ ಅನುದಾನಗಳನ್ನು ಪಡೆಯಲು ಬೇಡಿಕೆಗಳನ್ನು ಮಂಡಿಸಿದ ಮುಖ್ಯಮಂತ್ರಿ

ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು, ಮಾ.12: 2026ನೇ ಸಾಲಿನ ಮಾ.31ಕ್ಕೆ ಕೊನೆಗೊಳ್ಳುವ ಆರ್ಥಿಕ ವರ್ಷದಲ್ಲಿ ಆರ್ಥಿಕ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ನೀರಾವರಿ, ಲೋಕೋಪಯೋಗಿ, ಕಂದಾಯ, ಕೃಷಿ, ಕಾರ್ಮಿಕ, ಪಶುಸಂಗೋಪನೆ, ಹಿಂದುಳಿದ ವರ್ಗಗಳ ಕಲ್ಯಾಣ, ಸಹಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳಿಗೆ ಅನುದಾನಗಳನ್ನು ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಬೇಡಿಕೆಗಳನ್ನು ಮಂಡಿಸಿದರು.
ಆರ್ಥಿಕ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 42,516.84 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 9140 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆಗಳ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 1639.46 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 22.40 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ವಾರ್ತಾ ಮತ್ತು ಪ್ರವಾಸೋದ್ಯಮ ಮತ್ತು ಯುವಜನ ಸೇವೆಗಳ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 547.49 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 230.61 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ನೀರಾವರಿ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 977.13 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 15029.06 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಒಳಾಡಳಿತ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 19235.16 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 848.84 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಕಾನೂನು ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 2029.25 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 86.21 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 465.18 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 12.37 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 8270.45 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 4.21 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಮೂಲಭೂತ ಸೌಕರ್ಯ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 151.75 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 915.36 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 1529.83 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 1119.38 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಇಂಧನ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 26196.18 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 700 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 15313.23 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 2160.18 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 11817.80 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 5136.84 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ನಗರಾಭಿವೃದ್ಧಿ ಮತ್ತು ನಗರ ಯೋಜನೆ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 9845.22 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 11259.88 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.
ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ ವೆಚ್ಚವನ್ನು ವಹಿಸಲು ಸರಕಾರಕ್ಕೆ ರಾಜಸ್ವ ಖಾತೆಯಲ್ಲಿ 2508.52 ಕೋಟಿ ರೂ. ಮತ್ತು ಬಂಡವಾಳ ಖಾತೆಯಲ್ಲಿ 9228 ಕೋಟಿ ರೂ.ಗಳಿಗೆ ಮೀರದ ಮೊತ್ತವನ್ನು ಮಂಜೂರು ಮಾಡುವಂತೆ ಮುಖ್ಯಮಂತ್ರಿ ಬೇಡಿಕೆ ಮಂಡಿಸಿದ್ದಾರೆ.