ಕಾಂಗ್ರೆಸ್ ಸರಕಾರದ ಪೌರುಷ ಹಿಂದೂ ಹಬ್ಬಗಳಿಗೆ ಮಾತ್ರ ಸೀಮಿತ‌ : ಪ್ರಹ್ಲಾದ್ ಜೋಶಿ

Update: 2024-10-29 07:34 GMT

ಬೆಂಗಳೂರು: ಹಿಂದೂ ಹಬ್ಬಗಳ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಸರಕಾರದವರು ಪುರುಷತ್ವ ತೋರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಹಬ್ಬದಲ್ಲಿ ರಾಜ್ಯ ಸರಕಾರ ಪಟಾಕಿ ಸಿಡಿಸಲು ಹೇರಿದ ನಿರ್ಬಂಧ ಕುರಿತು ಪ್ರತಿಕ್ರಿಯಿಸಿದರು.

" ಹಿಂದೂ ಹಬ್ಬಗಳಲ್ಲಿ ಮಾತ್ರ ಡಿಜೆ ಹಾಕಲು, ವಿಗ್ರಹ ವಿಸರ್ಜಿಸಲು, ಮೆರವಣಿಗೆ ನಡೆಸಲು, ಪಟಾಕಿ ಸಿಡಿಸಲು ಸರಕಾರ ಸಮಯ ನಿಗದಿ, ನೀತಿ, ನಿಯಮ ಹೇರುತ್ತದೆ. ಮಸೀದಿಗಳಲ್ಲಿ ಬೆಳಗ್ಗೆ 5 ಗಂಟೆಗೇ ನಮಾಝ್ ಶುರು ಮಾಡುತ್ತಾರೆ. ಇದಕ್ಕೆ ಸರಕಾರದ ನೀತಿ, ನಿಯಮ ಏಕೆ ಅನ್ವಯಿಸಲ್ಲ?" ಎಂದು ಪ್ರಶ್ನಿಸಿದರು.

ಯಾರೂ, ಯಾವ ಪಟಾಕಿ ಹೊಡೆಯುವುದನ್ನೂ ತಡೆಯಲು ಸಾಧ್ಯವಿಲ್ಲ. ಯಾರು ಏನೇ ಮಾಡಿದರೂ ಅದರ ಪಾಡಿಗೆ ಅದು ನಡೆಯುತ್ತದೆ ಎಂದರು.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News