ಬೆಂಗಳೂರು | ಕೆಂಪೇಗೌಡ ಏರ್ಪೋರ್ಟ್ಗೆ ಹುಸಿ ಬಾಂಬ್ ಬೆದರಿಕೆ
Update: 2024-10-20 15:38 GMT
ಬೆಂಗಳೂರು : ದೇವನಹಳ್ಳಿಯ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದ ಕಮಾಂಡ್ ಸೆಂಟರ್‌ಗೆ ಹುಸಿ ಬಾಂಬ್ ಬೆದರಿಕೆ ಸಂದೇಶ ಬಂದಿರುವ ಘಟನೆ ವರದಿಯಾಗಿದೆ.
ಇಂಡಿಗೋ ಏರ್‍ಲೈನ್ಸ್‌ನ 6 ವಿಮಾನಗಳಲ್ಲಿ ತಲಾ ಇಬ್ಬರಂತೆ ಒಟ್ಟು 12 ಬಾಂಬರ್‌ಗಳಿದ್ದು, ಸ್ಪೋಟಿಸುವುದಾಗಿ ಅನಾಮಧೇಯ ಟ್ವಿಟರ್ ಖಾತೆಯಿಂದ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳೂರು-ದುಬೈ, ತಿರುವನಂತಪುರಂ-ಮಸ್ಕಟ್ ಸೇರಿದಂತೆ ದೇಶದ ವಿವಿಧ ಏರ್‌ಪೋರ್ಟ್‍ಗಳಿಂದ ತೆರಳುವ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ತಪಾಸಣೆ ಕೈಗೊಂಡ ಏರ್‌ಪೋರ್ಟ್ ಅಧಿಕಾರಿಗಳು ಹಾಗೂ ಪೊಲೀಸರು ಅದೊಂದು ಹುಸಿ ಬಾಂಬ್ ಬೆದರಿಕೆ ಸಂದೇಶವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಕೆಂಪೇಗೌಡ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.