ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಇಳಿಕೆ : ಗೃಹ ಸಚಿವ ಪರಮೇಶ್ವರ್

Update: 2025-03-17 22:31 IST
ರಾಜ್ಯದಲ್ಲಿ ಅಪರಾಧ ಪ್ರಕರಣ ಸಂಖ್ಯೆ ಇಳಿಕೆ : ಗೃಹ ಸಚಿವ ಪರಮೇಶ್ವರ್
  • whatsapp icon

ಬೆಂಗಳೂರು : ರಾಜ್ಯದಲ್ಲಿ ದಾಖಲಾದ ಕೊಲೆ, ಗಲಭೆ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿದ್ದು, 2025ರಲ್ಲಿ 204 ಕೊಲೆ ಪ್ರಕರಣ, 127 ಅತ್ಯಾಚಾರ ಪ್ರಕರಣ ಹಾಗೂ 551 ಗಲಭೆ ಪ್ರಕರಣಗಳು ನಡೆದಿವೆ ಎಂದು ಗೃಹ ಸಚಿವ ಡಾ. ಪರಮೇಶ್ವರ್ ತಿಳಿಸಿದ್ದಾರೆ.

ಸೋಮವಾರ ವಿಧಾನಪರಿಷತ್‍ನಲ್ಲಿ ಕೋಮುಗಲಭೆ, ಮೈಕ್ರೋ ಫೈನಾನ್ಸ್ ಹಾವಳಿ ಸೇರಿದಂತೆ ವಿವಿಧ ಅಪರಾಧಗಳ ಕುರಿತಾಗಿ ಬಿಜೆಪಿ ಸದಸ್ಯ ಸಿ.ಟಿ.ರವಿ, ರವಿಕುಮಾರ್, ಹೇಮಲತಾ ನಾಯಕ್ ಮತ್ತು ಜೆಡಿಎಸ್‍ನ ಸದಸ್ಯ ಟಿ.ಎ.ಶರವಣ ಸೇರಿದಂತೆ ಮತ್ತಿತರರು ಕೇಳಿದ ಪ್ರಶ್ನೆಗೆ ಗೃಹ ಸಚಿವರು ಉತ್ತಿರಿಸಿದರು.

2021ರಲ್ಲಿ 1,341 ಕೊಲೆ ಪ್ರಕರಣ, 556 ಅತ್ಯಾಚಾರ ಪ್ರಕರಣ, 3,977 ಗಲಭೆ ಪ್ರಕರಣ, 2022ರಲ್ಲಿ 1,368 ಕೊಲೆ ಪ್ರಕರಣ, 537 ಅತ್ಯಾಚಾರ ಪ್ರಕರಣ, 3,928 ಗಲಭೆ ಪ್ರಕರಣಗಳು ನಡೆದಿವೆ. 2023ರಲ್ಲಿ 1,296 ಕೊಲೆ ಪ್ರಕರಣ, 607 ಅತ್ಯಾಚಾರ ಪ್ರಕರಣ, 3,903 ಗಲಭೆ ಪ್ರಕರಣ, 2024ರಲ್ಲಿ 1,208 ಕೊಲೆ ಪ್ರಕರಣ, 629 ಅತ್ಯಾಚಾರ ಪ್ರಕರಣ, 3,447 ಗಲಭೆ ಪ್ರಕರಣಗಳು ನಡೆದಿವೆ ಎಂದು ಡಾ. ಪರಮೇಶ್ವರ್ ಉತ್ತರಿಸಿದರು.

ಹಿಂದೂಧಾರ್ಮಿಕ ಆಚರಣೆಗಳ ವೇಳೆ 2022ರಲ್ಲಿ 9 ಗಲಭೆಗಳು ನಡೆದಿದ್ದು, 4 ಪ್ರಕರಣಗಳಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿ ನಷ್ಟವಾಗಿದೆ. 2023ರಲ್ಲಿ 2 ಗಲಭೆಗಳು, 2024ರಲ್ಲಿ 4 ಗಲಭೆಗಳು ನಡೆದಿವೆ. ಹಿಂದೂ ಧಾರ್ಮಿಕ ಆಚರಣೆಗಳ ವೇಳೆ ಐದು ವರ್ಷದಲ್ಲಿ 15 ಗಲಭೆ ಪ್ರಕರಣಗಳು ನಡೆದಿವೆ ಎಂದು ಅವರು ಹೇಳಿದರು.

ಮೈಕ್ರೋ ಪೈನಾನ್ಸ್‌ ಗೆ ಸಂಬಂಧಿಸಿ 2023ರಲ್ಲಿ 6 ಪ್ರಕರಣ ದಾಖಲಾಗಿದ್ದು, 5 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2024ರಲ್ಲಿ 22 ಪ್ರಕರಣ ದಾಖಲಾಗಿದ್ದು, 7 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. 2025ರಲ್ಲಿ 90 ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗಿದ್ದು, 15 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಇತ್ತೀಚೆಗೆ ಗಂಗಾವತಿಯಲ್ಲಿ ನಡೆದ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಹಲವು ಸೂಚನೆಗಳನ್ನು ನೀಡಲಾಗಿದೆ. ವಿದೇಶಿಯರ ಆಗಮನದ ಬಗ್ಗೆ ಆನ್‍ಲೈನ್‍ನಲ್ಲಿ ಫಾರಂ ಸಿ ಭರ್ತಿ, ಸುರಕ್ಷತೆ ದೃಷ್ಟಿಯಿಂದ ಗಂಗಾವತಿ, ಸಣಾಪುರ ಸೇರಿ ಪ್ರವಾಸಿ ತಾಣಗಳ ಸುತ್ತಮುತ್ತ ನಿರಂತರ ವಾಹನ ತಪಾಸಣೆ, ಭದ್ರತೆ ಉಸ್ತುವಾರಿಗಾಗಿ ಇನ್ಸ್‌ ಪೆಕ್ಟರ್ ದರ್ಜೆ ಅಧಿಕಾರಿಯನ್ನು ರಾತ್ರಿ ಗಸ್ತು ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ವಾಗುತ್ತಿವೆ. 2022ರಲ್ಲಿ 10 ಸಾವಿರ ಕೇಸ್ ದಾಖಲಾದರೆ, 2024ರಲ್ಲಿ ವರ್ಷ 22 ಸಾವಿರ ಸೈಬರ್ ಪ್ರಕರಣಗಳಿಗೆ ಏರಿಕೆಯಾಗಿದೆ. ನಗರದಲ್ಲಿ ನಡೆಯುವ ಅಪರಾಧಗಳ ಪೈಕಿ ಶೇ.30ರಷ್ಟು ಸೈಬರ್ ಪ್ರಕರಣಗಳೇ ಆಗಿವೆ. ವೈಟ್‍ಫೀಲ್ಡ್ ಉಪವಿಭಾಗದಲ್ಲಿ ಶೇ.30ರಷ್ಟು ಸೈಬರ್ ವಂಚನೆ ಪ್ರಕರಣ ದಾಖಲಾಗಿವೆ ಎಂದು ಪರಮೇಶ್ವರ್ ಹೇಳಿದರು.

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸೈಬರ್ ವಂಚನೆ ಜಾಲ ಅಧಿಕವಾಗುತ್ತಿವೆ. ಇದನ್ನು ತಹಬದಿ ತರಲು ದೇಶದಲ್ಲಿ ಮೊದಲ ಬಾರಿಗೆ ಸೈಬರ್ ವಿಭಾಗ ಸ್ಥಾಪಿಸಿ, ಡಿಜಿಪಿ ಮಟ್ಟದ ಅಧಿಕಾರಿಯನ್ನು ನಿಯೋಜಿಸಲಾಗಿದೆ. ಪ್ರತಿಯೊಬ್ಬ ಪೆÇಲೀಸ್ ಕಾನ್ಸ್‍ಟೇಬಲ್‍ಗೂ ಸೈಬರ್ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿ ತಿಳಿಯಬೇಕು.

ಹೀಗಾಗಿ, ಈಗಾಗಲೇ 40 ಸಾವಿರ ಮಂದಿಗೆ ತರಬೇತಿ ನೀಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಪ್ರಸಾರ ಹಾಗೂ ಪ್ರಚೋದಕಕಾರಿ ವಿಡಿಯೋ ಪೆÇೀಸ್ಟ್ ತಡೆಯಲು ಪ್ರತಿ ಠಾಣೆಯಲ್ಲಿಯೂ ಸೋಷಿಯಲ್ ಮೀಡಿಯಾ ವಿಂಗ್ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News