ರನ್ಯಾ ರಾವ್ ಪ್ರಕರಣ | ಸಚಿವರ ಹೆಸರು ಯತ್ನಾಳ್ ಬಹಿರಂಗಪಡಿಸಲಿ: ರಾಮಲಿಂಗಾರೆಡ್ಡಿ ಸವಾಲು
Update: 2025-03-17 21:19 IST

ಬೆಂಗಳೂರು : ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧಿತ ಆರೋಪಿ ರನ್ಯಾ ರಾವ್ ಜೊತೆ ಇಬ್ಬರ ಸಚಿವರ ಹೆಸರನ್ನು ಬಿಜೆಪಿ ಶಾಸಕ ಬಸವ ಗೌಡ ಪಾಟೀಲ್ ಯತ್ನಾಳ್ ಬಹಿರಂಗಪಡಿಸಲಿ ಎಂದು ಸಚಿವ ರಾಮಲಿಂಗಾ ರೆಡ್ಡಿ ಸವಾಲು ಹಾಕಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಭೀರ ಆರೋಪವನ್ನು ಯತ್ನಾಳ್ ಮಾಡಿದ್ದು, ಈ ಬಗ್ಗೆ ಮಾಹಿತಿ ಇದ್ದರೆ ಬಹಿರಂಗ ಮಾಡಲಿ, ಯಾರದೂ ಅಡ್ಡಿ ಇಲ್ಲ. ಬೇಗ ಹೆಸರು ಹೇಳಲಿ ತನಿಖೆಗೆ ಸುಲಭ ಆಗಲಿದೆ ಎಂದು ತಿರುಗೇಟು ನೀಡಿದರು.