ಬೆಂಗಳೂರು | ಆಸ್ಪತ್ರೆಯ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು ಮಹಿಳಾ ರೋಗಿಗಳ ಖಾಸಗಿ ಅಂಗಾಂಗ ದೃಶ್ಯ ಸೆರೆ

Update: 2024-11-05 16:28 GMT

ಬೆಂಗಳೂರು: ಖಾಸಗಿ ಆಸ್ಪತ್ರೆಯೊಂದರ ಶೌಚಾಲಯದಲ್ಲಿ ಮೊಬೈಲ್‌ ಇಟ್ಟು  ಮಹಿಳಾ ರೋಗಿಗಳ ಖಾಸಗಿ ಅಂಗಾಂಗ ದೃಶ್ಯ ಸೆರೆ ಹಿಡಿಯುತ್ತಿದ್ದ ಆರೋಪದಡಿ ಆಸ್ಪತ್ರೆಯ ವಾರ್ಡ್ ಹೆಲ್ಪರ್ ನನ್ನು ತಿಲಕ್‌ನಗರ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ‌.

ಜಯದೇವ ಆಸ್ಪತ್ರೆಯ ವಾರ್ಡ್ ಹೆಲ್ಪರ್ ಯಲ್ಲಾಲಿಂಗ ಬಂಧಿತ ಆರೋಪಿ ಆಗಿದ್ದು, ಹುದ್ದೆಯಿಂದ ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆಯ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರು ಹೇಳಿದ್ದಾರೆ.

ಇತ್ತೀಚೆಗೆ ಮಹಿಳೆಯೊಬ್ಬರು ಆಸ್ಪತ್ರೆಯ ನೆಲಮಹಡಿಯಲ್ಲಿ ಇರುವ ಶೌಚಾಲಯಕ್ಕೆ ತೆರಳಿದಾಗ ಮೊಬೈಲ್‌ ಪತ್ತೆಯಾಗಿದೆ. ಇದನ್ನು ಪರಿಶೀಲಿಸಿದಾಗ ಆಕೆಯ ಖಾಸಗಿ ಅಂಗಾಂಗವಿದ್ಧ ವಿಡಿಯೊ ಸೆರೆ ಆಗಿತ್ತು. ಇದರಿಂದ ಗಾಬರಿಗೊಂಡ ಮಹಿಳೆ ಮೊಬೈಲ್‌ ತೆಗೆದುಕೊಂಡು ಹೊರಗೆ ಬಂದಿದ್ದಾರೆ ಎನ್ನಲಾಗಿದೆ.

ಆಗ ಆರೋಪಿ ಬಂದು, ಮೊಬೈಲ್‌ ಕೊಡುವಂತೆ ಕೇಳಿಕೊಂಡಿದ್ದ. ಅದೇ ಸಮಯಕ್ಕೆ ಆಸ್ಪತ್ರೆಯ ಬೇರೆ ಬೇರೆ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಬಂದು ಆರೋಪಿಯನ್ನು ಹಿಡಿದುಕೊಂಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಆರೋಪಿ ಯಲ್ಲಾಲಿಂಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ದೂರು ದಾಖಲಾದ ಬಳಿಕ ಸಂಸ್ಥೆಯ ಪೋಷ್ ಸಮಿತಿ ಎದುರು ವಿಚಾರಣೆಗೆ ಒಳಪಡಿಸಿ, ಅಮಾನತು ಮಾಡಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News