ಬೆಂಗಳೂರು: ಶೌಚಾಲಯದಲ್ಲಿ ನವಜಾತ ಶಿಶು ಮೃತದೇಹ ಪತ್ತೆ !

Update: 2024-11-28 19:10 IST
Photo of toilet

ಸಾಂದರ್ಭಿಕ ಚಿತ್ರ (credit: Meta AI)

  • whatsapp icon

ಬೆಂಗಳೂರು: ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದರಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ತಾಯಿಯೇ ನವಜಾತ ಶಿಶು ಮೃತದೇಹವನ್ನು ಶೌಚಾಲಯದಲ್ಲಿ ಹಾಕಿ ಪರಾರಿ ಆಗಿರುವ ಆರೋಪ ಕೇಳಿಬಂದಿದೆ.

ಹಾರೋಹಳ್ಳಿ ಸಮೀಪದ ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಬ್ಲಾಕ್ ಶೌಚ ಗುಂಡಿಯಲ್ಲಿ ಆಗತಾನೇ ಜನಿಸಿದ ನವಜಾತ ಶಿಶುವಿನ ಶವ ಪತ್ತೆಯಾಗಿದೆ. ನೀರು ಹೋಗದೆ ಕಟ್ಟಿಕೊಂಡಿದ್ದ ಹಿನ್ನಲೆಯಲ್ಲಿ ಸಿಬ್ಬಂದಿ ಪರಿಶೀಲಿಸುತ್ತಿದ್ದಾಗ ನವಜಾತ ಶಿಶುವಿನ ಶವ ಗಮನಿಸಿ ತಕ್ಷಣ ವೈದ್ಯರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಮಗುವಿನ ಜನನ ಮರೆಮಾಚಲು ತಾಯಿ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News