ಸಹ ಯೂಟ್ಯೂಬರ್ ಗೆ ಬೆದರಿಕೆ ಆರೋಪ: ಕನ್ನಡದ ಯೂಟ್ಯೂಬರ್ ನನ್ನು ವಶಕ್ಕೆ ಪಡೆದ ಪೊಲೀಸರು

Update: 2024-09-09 21:02 IST
ಸಹ ಯೂಟ್ಯೂಬರ್ ಗೆ ಬೆದರಿಕೆ ಆರೋಪ: ಕನ್ನಡದ ಯೂಟ್ಯೂಬರ್ ನನ್ನು ವಶಕ್ಕೆ ಪಡೆದ ಪೊಲೀಸರು

Screengrab:X/@BlrCityPolice

  • whatsapp icon

ಬೆಂಗಳೂರು: ಸಹ ಯೂಟ್ಯೂಬರ್ ಗೆ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಕನ್ನಡದ ಯೂಟ್ಯೂಬರ್ ನನ್ನು ಇಲ್ಲಿನ ಕಾಡುಗೋಡಿ ಠಾಣಾ ಪೊಲೀಸರು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

ಆರೋಪಿ ದೀಪಕ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಆರೋಪಿ ದೀಪಕ್ ಸ್ವತಃ @DVINKANNADA ಎನ್ನುವ ತಮ್ಮ ಯೂಟ್ಯೂಬ್ ಚಾನೆಲ್‍ನಲ್ಲಿ ಸಹ ಯೂಟ್ಯೂಬರ್ ಗೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತಂತೆ ವಿಡಿಯೋವನ್ನು ತನ್ನ ಚಾನೆಲ್‍ನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿರುವ ಪೊಲೀಸರು ‘ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಹಾಕಿ ಸಾರ್ವಜನಿಕರಲ್ಲಿ ಸುರಕ್ಷತಾ ಭಯವನ್ನು ಉಂಟುಮಾಡಿರುವ ದೀಪಕ್ ಎಂಬ ವ್ಯಕ್ತಿಯನ್ನು ಪತ್ತೆ ಮಾಡಿ, ವಶಕ್ಕೆ ಪಡೆದು, ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News