‘ವಕೀಲರ ಪ್ರತಿಭಟನೆ’ ಐಜೂರು ಠಾಣಾ ಪಿಎಸ್ಸೈ ಅಮಾನತು: ಗೃಹ ಸಚಿವ ಜಿ.ಪರಮೇಶ್ವರ್

Update: 2024-02-21 23:13 IST
‘ವಕೀಲರ ಪ್ರತಿಭಟನೆ’ ಐಜೂರು ಠಾಣಾ ಪಿಎಸ್ಸೈ ಅಮಾನತು: ಗೃಹ ಸಚಿವ ಜಿ.ಪರಮೇಶ್ವರ್
  • whatsapp icon

ಬೆಂಗಳೂರು : ವಕೀಲರ ಪ್ರತಿಭಟನೆ ಸಂಬಂಧ ರಾಮನಗರದ ಐಜೂರು ಪೊಲೀಸ್ ಠಾಣೆಯ ಪಿಎಸ್ಸೈ ಅನ್ನು ಅಮಾನತು ಮಾಡಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ಸದನದ ಕಾರ್ಯ ಕಲಾಪಗಳ ಸಲಹಾ ಸಮಿತಿ (ಬಿಎಸ್ಸಿ)ಸಭೆಯ ತೀರ್ಮಾನದಂತೆ ನಿನ್ನೆ ನಾವು ಪ್ರಸ್ತಾಪಿಸಿದ ರಾಮನಗರ ವಕೀಲರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವರು ಹೇಳಿಕೆ ನೀಡಬೇಕು ಎಂದು ಒತ್ತಾಯಿಸಿದರು.

ಬಳಿಕ ಸ್ಪೀಕರ್ ಯು.ಟಿ.ಖಾದರ್, ‘ಗೃಹ ಸಚಿವರಿಗೆ ಹೇಳಿಕೆ ನೀಡಲು ಅವಕಾಶ ಮಾಡಿಕೊಟ್ಟರು. ಅನಂತರ ಮಾತನಾಡಿದ ಡಾ.ಜಿ.ಪರಮೇಶ್ವರ್, ‘ಐಜೂರು ಪೊಲೀಸ್ ಠಾಣೆಯ ಪಿಎಸ್ಸೈ ತನ್ವೀರ್ ಹುಸೇನ್ ಅನ್ನು ಅಮಾನತು ಮಾಡುತ್ತಿದ್ದೇವೆ. ವಕೀಲರ ಪ್ರತಿಭಟನೆಗೆ ಕಾರಣರಾದ ಚಾಂದ್‍ಪಾ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಘಟನೆ ಸಂಬಂಧ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಆರಂಭಗೊಂಡಿದೆ ಎಂದರು.

ಪಿಎಸ್ಸೈ ಅಮಾನತು ಮಾಡಿರುವುದರಿಂದ ತನಿಖೆಗೂ ಅನುಕೂಲವಾಗಲಿದೆ. ರಾಮಗನರದಲ್ಲಿ ಈ ಹಿಂದೆ ಕೂಡ ಇಂತಹ ಘಟನೆಗಳು ಆಗಿದ್ದವು ಎಂದು ಸದನಕ್ಕೆ ಅವರು ತಿಳಿಸಿದರು.

ಆರ್.ಅಶೋಕ್ ಮಾತನಾಡಿ, ‘ರಾಮನಗರದ ಹಿಡಿತವನ್ನು ಮೀರಿ ತಪ್ಪು ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ ನಮ್ಮ ಬೇಡಿಕೆಯಂತೆ ಗೃಹಸಚಿವರು ಕ್ರಮ ಕೈಗೊಂಡಿದ್ದಾರೆ. ಸರಕಾರ ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರ ಕೈಗೊಂಡಿದ್ದು, ಈ ಉತ್ತರ ಸಮಾಧಾನ ತಂದಿದೆ’ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News