ಯುವಕರನ್ನು ರಾಷ್ಟ್ರ ನಿರ್ಮಾಣ, ಸಮಾಜ ಸೇವೆಗೆ ಬಳಸಿಕೊಳ್ಳಬೇಕು : ಇಬ್ರಾಹಿಂ ಸಖಾಫಿ ಪಯೋಟ

Update: 2024-06-27 12:07 GMT

ಬೆಂಗಳೂರು: ಯುವಕರನ್ನು ರಾಷ್ಟ್ರ ನಿರ್ಮಾಣ, ಸಮಾಜ ಸೇವೆಗೆ ಬಳಸಿಕೊಳ್ಳಬೇಕು. ಆ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಸಹಕರಿಯಾಗಬೇಕು ಎಂದು ಇಬ್ರಾಹಿಂ ಸಖಾಫಿ ಪಯೋಟ ಕರೆ ನೀಡಿದರು.

ಎಸ್‌ವೈಎಸ್ ಜಯನಗರ ಝೋನ್ ವಾರ್ಷಿಕ ಕೌನ್ಸಿಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಸಖಾಫಿ ಅವರು, ದೇಶದಲ್ಲಿ ಕೋಮುವಾದವು ಅಪಾಯಕಾರಿಯಾಗಿ ಹೆಚ್ಚುತ್ತಿದ್ದು, ಇದರಿಂದ ದೇಶ ಅಭದ್ರತೆಯತ್ತ ಸಾಗುತ್ತಿದೆ. ಯುವಕರು ತಮ್ಮ ಯುವತ್ವವನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಜತೆಗೆ ಅದಕ್ಕೆ ಉಪಯುಕ್ತವಾದ ಆಧ್ಯಾತ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಲು ಸಿದ್ಧರಾಗಬೇಕು ಎಂದರು

ಝೋನ್ ಕಾರ್ಯದರ್ಶಿ ಅಕ್ನಾಸ್ ಆರೀಕೆರೆ ಮತ್ತು ಕೋಶಧಿಕಾರಿ ಆಶಿಕ್ ಪಯಾಡತ್ ಅವರು ಸಮಿತಿಯ ಒಂದು ವರ್ಷದ ವಾರ್ಷಿಕ ವರದಿಯನ್ನು ಮಂಡಿಸಿದರು.

ಬಶೀರ್ ಸಅದಿಯವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಕೌನ್ಸಿಲ್ ನಲ್ಲಿ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯದರ್ಶಿ ಶಂಸುದ್ದೀನ್, ಫಿರ್ದೌಸ್ ಮಾರತಹಳ್ಳಿ ಉಪಸ್ಥಿತರಿದ್ದರು.

ಶಿಹಾಬ್ ಮಡಿವಾಳ ಸ್ವಾಗತಿಸಿ, ಜಮಾಲ್ ಸಖಾಫಿ ಧನ್ಯವಾದ ಸಮರ್ಪಿಸಿದರು.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News