ಬೆಂಗಳೂರು | ಜು.12ರಂದು ಸಂಸದ ಸಸಿಕಾಂತ್ ಸೆಂಥಿಲ್ ಜೊತೆಗೆ ಸಂವಾದ ಕಾರ್ಯಕ್ರಮ

Update: 2024-07-10 17:01 GMT

ಬೆಂಗಳೂರು : ಜಾಗೃತ ಕರ್ನಾಟಕದ ವತಿಯಿಂದ ಮಾಜಿ ಐಎಎಸ್ ಅಧಿಕಾರಿ, ತಮಿಳುನಾಡಿನ ಸಂಸದ ಸಸಿಕಾಂತ್ ಸೆಂಥಿಲ್ ಜೊತೆಗೆ ಮರಳಿ ಸಂವಿಧಾನದೆಡೆಗೆ ಸಂವಾದ ಕಾರ್ಯಕ್ರಮವನ್ನು ನಾಳೆ(ಜು.12) ಸಂಜೆ 4ಗಂಟೆಗೆ ನಗರದ ಅರಮನೆ ರಸ್ತೆಯಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕುರಿತು ಪ್ರಕಟನೆ ನೀಡಿರುವ ರಾಜ್ಯ ಸಮಿತಿ ಸದಸ್ಯ ರಾಜಶೇಖರ ಅಕ್ಕಿ, ಕರ್ನಾಟಕ ಕೇಡರ್‌ ನ ಜನಪ್ರಿಯ ಐಎಎಸ್ ಅಧಿಕಾರಿಯಾದ ಸಸಿಕಾಂತ್ ಸೆಂಥಿಲ್ ರಾಯಚೂರು ಮತ್ತು ದಕ್ಷಿಣ ಕನ್ನಡದ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದರು. ಸರಳತೆ, ಪ್ರಾಮಾಣಿಕತೆ ಮತ್ತು ದಕ್ಷತೆಯ ಕಾರಣಕ್ಕಾಗಿ ಹೆಸರುವಾಸಿಯಾಗಿದ್ದ ಅವರು ಮೋದಿ ಸರಕಾರದ ಸರ್ವಾಧಿಕಾರಿತನ ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮಿಳುನಾಡಿನ ತಿರುವಳ್ಳೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ದಾಖಲೆಯ 5.72ಲಕ್ಷ ಮತಗಳ ಅಂತರದಲ್ಲಿ ಗೆದ್ದು ಮೊದಲ ಬಾರಿಗೆ ಸಂಸತ್ ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ.

ಸಂವಿಧಾನದ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತೆಯ ಆಶಯಗಳಿಗೆ ಸಮರ್ಪಿತವಾದ ರಾಜಕಾರಣ ಕಟ್ಟುವ ಉದ್ದೇಶ ಹೊಂದಿರುವ ಜಾಗೃತ ಕರ್ನಾಟಕ ಸಂಘಟನೆಯು ‘ಮರಳಿ ಸಂವಿಧಾನದೆಡೆಗೆ’ ಎನ್ನುವ ಶೀರ್ಷಿಕೆಯಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಮೊದಲ ಕಾರ್ಯಕ್ರಮವಾಗಿ ಜನಾದೇಶ-2024, ಸಂವಿಧಾನ ಕಲ್ಪಿಸಿದ ಭಾರತಕ್ಕಾಗಿ ಹೊಸ ರಾಜಕಾರಣ ಹೇಗೆ? ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಂವಾದ ಕಾರ್ಯಕ್ರಮದಲ್ಲಿ ಸಂಚಾಲಕಿ ಸೀತಾ, ಸಂಘಟನಾ ಕಾರ್ಯದರ್ಶಿ ಮುತ್ತುರಾಜ್, ರಾಜ್ಯ ಸಮಿತಿ ಸದಸ್ಯ ಡಾ.ಎಚ್.ವಿ.ವಾಸು ಹಾಗೂ ಪತ್ರಕರ್ತ ದೊಡ್ಡಿಪಾಳ್ಯ ನರಸಿಂಹಮೂರ್ತಿ ಭಾಗವಹಿಸಲಿದ್ದಾರೆ ಎಂದು ರಾಜಶೇಖರ ಅಕ್ಕಿ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News