ವಿಕ್ಷಿತ್ ಭಾರತ್@2047 ಯುವಜನತೆಯ ಧ್ವನಿಗೆ ಪ್ರಧಾನಿ ಮೋದಿ ಚಾಲನೆ: ಸಾಕ್ಷಿಯಾದ ರಾಜ್ಯಪಾಲರು

Update: 2023-12-11 17:29 GMT

ಬೆಂಗಳೂರು, ಡಿ.11: ಪ್ರಧಾನಿ ನರೇಂದ್ರ ಮೋದಿ ಅವರು ‘ವೀಕ್ಷಿತ್ ಭಾರತ್@2047 ಯುವಜನತೆಯ ಧ್ವನಿ'ಗೆ ಚಾಲನೆ ನೀಡಿದ್ದು, ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದಿಂದ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಜ್ಯಪಾಲರು, ಭಾರತವು ತನ್ನ ಇತಿಹಾಸದಲ್ಲಿ ಒಂದು ಮಹತ್ವದ ಘಟ್ಟದಲ್ಲಿದೆ. 21ನೇ ಶತಮಾನವು ಭಾರತದ ಶತಮಾನವಾಗಲಿದೆ, ಏಕೆಂದರೆ ದೇಶವು ತನ್ನ ಸಾಮಥ್ರ್ಯಗಳಲ್ಲಿ ವಿಶ್ವಾಸದಿಂದ ಭವಿಷ್ಯದತ್ತ ಸಾಗುತ್ತಿದೆ ಎಂದು ಹೇಳಿದರು.

ಭಾರತವು ಇಂದು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು 2027ರ ವೇಳೆಗೆ ಅದರ ಜಿಡಿಪಿ ಯುಎಸ್ ಡಾಲರ್ 5 ಟ್ರಿಲಿಯನ್(ಐಎಂಎಫ್ ಅಂದಾಜುಗಳು) ದಾಟುವ ಮೂಲಕ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗಿದೆ. 2047ರ ವೇಳೆಗೆ, ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರದ ಎಲ್ಲ ಗುಣಲಕ್ಷಣಗಳೊಂದಿಗೆ ಯುಎಸ್ ಡಾಲರ್ 30 ಟ್ರಿಲಿಯನ್ ಆರ್ಥಿಕತೆಯಾಗಲು ಸಿದ್ಧವಾಗಿದೆ. ಇದು ಅಭಿವೃದ್ಧಿ ಹೊಂದಿದ ಭಾರತವಾಗಲಿದೆ ಎಂದು ತಿಳಿಸಿದರು.

2015ರಲ್ಲಿ ಭಾರತ ಸರಕಾರವು ಅಳವಡಿಸಿಕೊಂಡ ಸುಸ್ಥಿರ ಅಭಿವೃದ್ಧಿ ಕಾರ್ಯಸೂಚಿಯ ಪ್ರಕಾರ, 2030ರ ವೇಳೆಗೆ "ಎಲ್ಲರಿಗೂ ಒಳಗೊಳ್ಳುವ ಮತ್ತು ಸಮಾನ ಗುಣಮಟ್ಟದ ಶಿಕ್ಷಣವನ್ನು ಖಚಿತಪಡಿಸುವುದು ಮತ್ತು ಜೀವಮಾನದ ಕಲಿಕೆಯ ಅವಕಾಶಗಳನ್ನು ಉತ್ತೇಜಿಸುವುದು" ಗುರಿಯಾಗಿದೆ ಎಂದು ರಾಜ್ಯಪಾಲರು ಹೇಳಿದರು.

ಯುವಕರನ್ನು ದೇಶದ ಅಭಿವೃದ್ಧಿಯಲ್ಲಿ ಭಾಗಿಗಳನ್ನಾಗಿ ಮಾಡಲು, ಅವರಿಗೆ ಇತ್ತೀಚಿನ ಜ್ಞಾನ ಮತ್ತು ತಂತ್ರಜ್ಞಾನವನ್ನು ಪರಿಚಯಿಸುವ ಅವಶ್ಯಕತೆಯಿದೆ, ಇದರಿಂದ ಅವರು ಸುತ್ತಮುತ್ತಲಿನ ಪರಿಸರವನ್ನು ಬಳಸಿಕೊಂಡು ಸ್ವಯಂ ಉದ್ಯೋಗದತ್ತ ಪ್ರೇರೇಪಿಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂದು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News