ಬೆಳಗಾವಿಯಲ್ಲಿ ಅಪರಿಚಿತರಿಂದ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

Update: 2025-01-10 09:43 GMT

PC : freepik.com

ಬೆಳಗಾವಿ : ಬೆಳಗಾವಿ ತಾಲೂಕಿನ ಗಣೇಶಪುರದ ಹೊರವಲಯದಲ್ಲಿ ಅಪರಿಚಿತರು, ರೌಡಿಶೀಟರ್ ಪ್ರಫುಲ್ ಪಾಟೀಲ್ ಎಂಬವರ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ.

ರೌಡಿಶೀಟರ್ ಪ್ರಫುಲ್​ ಪಾಟೀಲ್​ ಬೆಳಗುಂದಿ ಗ್ರಾಮದಿಂದ ಮನೆಗೆ ಹೋಗುವಾಗ ಅಪರಿಚಿತರು ಚಲಿಸುವ ಕಾರಿನ‌ ಮೇಲೆ ಗುಂಡಿನ ದಾಳಿ ನಡೆಸಿದ್ದು, ಕಾರಿನ ಗಾಜುಗಳು ಚೂರುಗಳು ಚುಚ್ಚಿ ಪ್ರಫುಲ್ ಮುಖ ಮತ್ತು ತಲೆಭಾಗಕ್ಕೆ ಗಾಯವಾಗಿದೆ.

ರೌಡಿಶೀಟರ್ ಪ್ರಫುಲ್​ ಪಾಟೀಲ್​ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News