ಜಾತಿ ನಿಂದನೆ ಪ್ರಕರಣ ಚರ್ಚೆಗೆ ಅವಕಾಶ ಕೊಡಿ : ನಯನಾ ಮೋಟಮ್ಮ

Update: 2024-12-18 13:55 GMT

ಬೆಳಗಾವಿ : ‘ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣ, ಜಾತಿ ನಿಂದನೆ ಮತ್ತು ಎಚ್‍ಐವಿ ರೋಗವನ್ನು ಸೋಂಕಿಸಿ ವಿವಿಧ ಗಣ್ಯರ ಜೀವಕ್ಕೆ ಅಪಾಯ ತರುವ ಪ್ರಯತ್ನ ಮಾಡಿರುವ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಬೇಕು, ನಮಗೆ ಯಾವಾಗ ಅವಕಾಶ ಕಲ್ಪಿಸುತ್ತೀರಿ’ ಎಂದು ಕಾಂಗ್ರೆಸ್ ಸದಸ್ಯೆ ನಯನಾ ಮೋಟಮ್ಮ, ಸ್ಪೀಕರ್ ಖಾದರ್ ಅವರಿಗೆ ಪ್ರಶ್ನಿಸಿದ ಪ್ರಸಂಗ ನಡೆಯಿತು.

ಬುಧವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಮಹಿಳೆಯ ಪರವಾದ ವಿಷಯ ಪ್ರಸ್ತಾಪಿಸಲು ಅವಕಾಶ ನೀಡಬೇಕು. ಜಾತಿ ನಿಂದನೆಯಾಗಿದೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಯು.ಟಿ.ಖಾದರ್, ‘ನೀವು ನೀಡಿರುವ ನೋಟಿಸ್ ನಿಯಮ 69ರಡಿ ಚರ್ಚೆಗೆ ಕಾರ್ಯಕಲಾಪಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆ ವಿಚಾರ ಸಿಟ್ ವಿಚಾರಣೆಯಲ್ಲಿದೆ. ನ್ಯಾಯಾಲಯದ ವಿಚಾರವೂ ಇದೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಆಕ್ಷೇಪಿಸಿದ್ದರಿಂದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಗದ್ದಲ ಉಂಟಾಯಿತ್ತು.

ಬಳಿಕ ಮಾತನಾಡಿದ ಸ್ಪೀಕರ್ ಖಾದರ್, ವಿಷಯ ಚರ್ಚೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿಲ್ಲ. ಯಾವುದೇ ವಿಚಾರ ತನಿಖೆ ಹಂತದಲ್ಲಿದ್ದರೆ ಚರ್ಚಿಸಬಹುದು. ಆದರೆ ತನಿಖೆಗೆ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗದಂತೆ ಚರ್ಚೆ ಮಾಡಬೇಕಾಗುತ್ತದೆ. ನಾಳೆ(ಡಿ.19) ಬೆಳಗ್ಗೆ ಅವಕಾಶ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕಂದಾಯ ಸಚಿವ ಕೃಷ್ಣಭೈರೇಗೌಡ, ವ್ಯಕ್ತಿಯ ಬಗ್ಗೆ ನೇರವಾಗಿ ಉಲ್ಲೇಖ ಮಾಡದೇ ಮಹಿಳೆಯರ ದುರ್ಬಳಕೆ, ಘನತೆಗೆ ಧಕ್ಕೆ, ಮಹಿಳೆಯರ ದಾಳವಾಗಿ ಬಯಸಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ ವಿಚಾರಣೆಗೆ ಧಕ್ಕೆಯಾಗದಂತೆ ಚರ್ಚೆ ನಡೆಸಿದರೆ ನಿಯಮಾವಳಿ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News