ವಕೀಲರೊಂದಿಗೆ ನಟ ದರ್ಶನ್ ಭೇಟಿ ಮಾಡಿದ ಪತ್ನಿ ವಿಜಯಲಕ್ಷ್ಮಿ
ಬೆಂಗಳೂರು/ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಗುರುವಾರ ಪತ್ನಿ ವಿಜಯಲಕ್ಷ್ಮಿ ವಕೀಲರೊಂದಿಗೆ ಭೇಟಿ ಮಾಡಿದ್ದಾರೆ.
ಗುರುವಾರ ಮಧ್ಯಾಹ್ನ 12:15 ಗಂಟೆಗೆ ಜೈಲಿನ ಒಳಹೋದ ವಿಜಯಲಕ್ಷ್ಮಿ ಮತ್ತು ವಕೀಲರು 1:20ಕ್ಕೆ ಹೊರಬಂದಿದ್ದಾರೆ. 12:50ಕ್ಕೆ ಹೈ ಸೆಕ್ಯೂರಿಟಿ ಸೆಲ್‍ಗೆ ಆರೋಪಿ ದರ್ಶನ್ ತೆರಳಿದ ನಂತರ 1.20ಕ್ಕೆ ಇವರು ಹೊರಬಂದಿದ್ದು, ಸುಮಾರು 1 ಗಂಟೆಗೂ ಹೆಚ್ಚು ಕಾಲ ದರ್ಶನ್ ಅವರೊಂದಿಗೆ ಪತ್ನಿ ಹಾಗೂ ವಕೀಲರು ಜೈಲಿನೊಳಗೆ ಮಾತುಕತೆ ನಡೆಸಿದ್ದಾರೆ.
ಈ ಭೇಟಿಯ ಬಳಿಕ ದರ್ಶನ್ ಪರ ವಕೀಲ ಸುನೀಲ್ ಮಾತನಾಡಿ, ಚಾರ್ಜ್‍ಶೀಟ್ ವಿಚಾರದ ಬಗ್ಗೆ ಮಾತನಾಡಿದ್ದೇವೆ. ಜಾಮೀನು ಅರ್ಜಿ ಹಾಕುವ ಬಗ್ಗೆ ಮಾತನಾಡಿಲ್ಲ. ಜೈಲು ಬದಲಾಯಿಸುವ ಬಗ್ಗೆಯೂ ಚರ್ಚಿಸಿಲ್ಲ. ಚಾರ್ಜ್‍ಶೀಟ್‍ನಲ್ಲಿ ಏನಿದೆಯೋ ಅದರ ಬಗ್ಗೆಯಷ್ಟೇ ಚರ್ಚೆ ನಡೆಸಿದ್ದೇವೆ. ಕೆಲವೊಂದಿಷ್ಟು ಗೊಂದಲಗಳಿದ್ದವು, ಆ ಬಗ್ಗೆ ಸ್ಪಷ್ಟನೆ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.