ಸಂಡೂರು | ದೇವಗಿರಿ ಗ್ರಾ.ಪಂ.ನಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಆರೋಪ : ಸಾರ್ವಜನಿಕರಿಂದ ಪ್ರತಿಭಟನೆ
Update: 2024-12-04 10:02 GMT
ಬಳ್ಳಾರಿ : ಸಂಡೂರು ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಉಗ್ರಾಣದಲ್ಲಿ ಬಿಸಾಡಿರುವುದನ್ನು ಕಂಡ ಸ್ಥಳೀಯರು ದೇವಗಿರಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದಾಗ ʼನಾನು ರಜೆಯಲ್ಲಿದ್ದು, ಇದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಈಗ ಕಚೇರಿಗೆ ಹೊರಟಿದ್ದೇನೆ. ಏನಾಗಿದೆ ತಿಳಿದುಕೊಂಡು ಸರಿಪಡಿಸಿಕೊಂಡು ನಿಮ್ಮ ಸಂಪರ್ಕಕ್ಕೆ ಬರುತ್ತೇನೆʼ ಎಂದು ಸಂಡೂರು ತಾಲೂಕಿನ ದೇವಗೇರಿ ಗ್ರಾಮ ಪಂಚಾಯತಿಯ ಅಧಿಕಾರಿ (ಪಿಡಿಒ) ಕೊಟ್ರಯ್ಯ ಸ್ವಾಮಿ ಪತ್ರಿಕೆಗೆ ದೂರವಾಣಿ ಮೂಲಕ ಉತ್ತರಿಸಿದರು.
ಈ ಘಟನೆಗೆ ಕಾರಣಕರ್ತರದ ಅಧಿಕಾರಿಗಳ ಮೇಲೆ ಕೂಡಲೇ ಕಾನೂನು ಕ್ರಮ ಜರುಗಿಸಬೇಕೆಂದು ಅಲ್ಲಿಯ ಸಾರ್ವಜನಿಕರು ಒತ್ತಾಯಿಸಿದ್ದಾರೆ.