ಬೀದರ್ | ಮಾ.15ರಂದು ಜೆಸ್ಕಾಂ ಕುಂದು ಕೊರತೆ ನಿವಾರಣಾ ಸಭೆ
Update: 2025-03-12 17:42 IST
ಬೀದರ್ : ಜೇಸ್ಕಾಂ ನ ಹುಮನಾಬಾದ್ ಕಾರ್ಯ ಮತ್ತು ಪಾಲನೆ ವಿಭಾಗ ವ್ಯಾಪ್ತಿಯಲ್ಲಿ ಬರುವ ಹುಮನಾಬಾದ್, ಮನ್ನಾಏಖೇಳ್ಳಿ ಹಾಗೂ ಬಸವಕಲ್ಯಾಣ ಉಪ ವಿಭಾಗಗಳಲ್ಲಿ ಮಾ.15 ರಂದು ಗ್ರಾಹಕರ ಕುಂದು ಕೊರತೆ ನಿವಾರಣಾ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಹುಮನಾಬಾದ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 11 ರಿಂದ 1 ಗಂಟೆವರೆಗೆ ಹುಮನಾಬಾದ ಉಪ ವಿಭಾಗದ ಗ್ರಾಮೀಣ ಶಾಖೆಯ ಕಚೇರಿ, ಮನ್ನಾಏಖೇಳ್ಳಿ ಉಪ ವಿಭಾಗದ ಶಾಖೆಯ ಕಚೇರಿ ಹಾಗೂ ಬಸವಕಲ್ಯಾಣ ಉಪ ವಿಭಾಗದ ಮುಚಳಂಬ ಶಾಖೆ ಕಚೇರಿಯಲ್ಲಿ ಕುಂದು ಕೊರತೆ ಸಭೆಗಳು ನಡೆಯಲಿವೆ. ಹಾಗಾಗಿ ಸಾರ್ವಜನಿಕರು ಹಾಗೂ ಗುವಿಸಕಂನಿ ಗ್ರಾಹಕರು ಈ ಸಭೆಯಲ್ಲಿ ಉಪಸ್ಥಿತರಿದ್ದು, ಕುಂದು ಕೊರತೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.