ಬೀದರ್ : ನಾಳೆ ಜನಸಂಪರ್ಕ ಸಭೆ

Update: 2025-03-14 11:46 IST
ಬೀದರ್ : ನಾಳೆ ಜನಸಂಪರ್ಕ ಸಭೆ
  • whatsapp icon

ಬೀದರ್ : ಜಿಲ್ಲಾ ಕಾರ್ಯ ಮತ್ತು ಪಾಲನೆ ವಿಭಾಗದ ವ್ಯಾಪ್ತಿಯಲ್ಲಿ ಬರುವ ಔರಾದ್ (ಬಿ), ಭಾಲ್ಕಿ, ಬೀದರ್, ಕಮಠಾಣ ಉಪ ವಿಭಾಗದಲ್ಲಿ ಮಾ.15 ರಂದು ಜನ ಸಂಪರ್ಕ ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜನ ಸಂಪರ್ಕ ಸಭೆಯಲ್ಲಿ ಕೆಇಆರ್‌ಸಿಯ(ಎಸ್.ಒ.ಪಿ.) ಮಾನದಂಡಗಳನ್ನು ಕುರಿತು ಅರಿವು ಮೂಡಿಸಲಾಗುವುದು. ಕಾರ್ಯಕ್ರಮವನ್ನು ಕಾರ್ಯನಿರ್ವಾಹಕ ಇಂಜಿನಿಯರ್, ಗು.ವಿ.ಸ.ಕಂ.ನಿ ಯ ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರ್ ಅವರ ಅಧ್ಯಕ್ಷತೆಯಲ್ಲಿ ಈ ಸಭೆ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಔರಾದ್ (ಬಿ) ಯ ವಿಭಾಗ ಕಚೇರಿ, ಬೀದರ್ ನಗರ ಉಪ ವಿಭಾಗ ಕಚೇರಿ, ಬೀದರ್ ಗ್ರಾಮೀಣ ಉಪ ವಿಭಾಗ ಕಛೇರಿಯಲ್ಲಿ ಹಾಗೂ ಮಧ್ಯಾಹ್ನ 3 ಗಂಟೆಗೆ ಭಾಲ್ಕಿ ಉಪ ವಿಭಾಗ ಕಛೇರಿ ಮತ್ತು ಕಮಠಾಣ ಉಪ ವಿಭಾಗ ಕಛೇರಿಯಲ್ಲಿ ಸಭೆಗಳು ನಡೆಯಲಿವೆ. ಸಾರ್ವಜನಿಕರು ಹಾಗೂ ಗು.ವಿ.ಸ.ಕಂ.ನಿ ಗ್ರಾಹಕರು ಈ ಸಭೆಯಲ್ಲಿ ಭಾಗವಹಿಸಿ ಕುಂದು ಕೊರತೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News