ಬೀದರ್ | ಬಿಹಾರದ ಬುದ್ಧಗಯಾ ಬೌದ್ಧ ವಿಹಾರದ ಮುಕ್ತಿಗಾಗಿ ಪ್ರತಿಭಟನೆ

Update: 2025-03-12 17:39 IST
Photo of Protest
  • whatsapp icon

ಬೀದರ್ : ಬುದ್ಧಗಯಾ ಮಂದಿರ ಕಾಯಿದೆ 1949 ಅನ್ನು ರದ್ದುಪಡಿಸಿ ಬಿಹಾರದ ಬೌದ್ಧ ವಿಹಾರ ಸಂಪೂರ್ಣ ಆಡಳಿತ ಮಂಡಳಿಯ ಅಧಿಕಾರ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿ ಭಾರತೀಯ ಬೌದ್ಧ ಮಹಾಸಭಾದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಇಂದು ನಗರದ ಅಂಬೇಡ್ಕರ್ ಭವನದಿಂದ ಪ್ರತಿಭಟನೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ತಲುಪಿ ಜಿಲ್ಲಾಧಿಕಾರಿ ಮೂಲಕ ಬಿಹಾರದ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರೇಕೊಳಗಿ ಮೌಂಟ್ ಮನ್ನಾಎಖೆಳ್ಳಿ ಭಂತೆ ಧರ್ಮಪಾಲ್, ವೈಶಾಲಿ ನಗರ ಆಣದೂರಿನ ಭಂತೆ ಸಂಘ ರಖ್ಖಿತ, ದೇವನಾಂಪ್ರಿಯ ಬುದ್ಧ ವಿಹಾರ್ ಹಾಲಹಾಳ್ಳಿಯ ಭಂತೆ ದಮ್ಮದೀಪ್, ಭಾರತೀಯ ಬೌದ್ಧ ಮಹಾಸಭೆಯ ರಾಜ್ಯಧ್ಯಕ್ಷ ಮನೋಹರ್ ಮೋರೆ, ರಾಜ್ಯ ಕಾರ್ಯದರ್ಶಿ ವೈಶಾಲಿ ಮೋರೆ, ಜಿಲ್ಲಾಧ್ಯಕ್ಷ ರಾಜಪ್ಪಾ ಗುನ್ನಳ್ಳಿಕರ್, ಹಿರಿಯರಾದ ವಿಠಲ್ ದಾಸ್ ಪ್ಯಾಗೆ, ಮಾರುತಿ ಬೌದ್ದೆ, ಮಹೇಶ್ ಗೋರನಾಳಕರ್, ಮಂಜುಳಾ ಭಾವಿದೊಡ್ಡಿ ಹಾಗೂ ಚಂದ್ರಕಲಾ ಬಡಿಗೇರ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News