ಬೀದರ್ | ಜಾನುವಾರುಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕು : ಡಾ.ಆರ್.ಬಿಜುಕರ್

Update: 2025-01-12 13:10 GMT

ಬೀದರ್ : ಹಳ್ಳಿಗಳಲ್ಲಿ ಇನ್ನೂ ಹಳೆಯ ವಿಧಾನದಲ್ಲಿಯೇ ಪಶುಸಂಗೋಪನೆ ನಡೆಯುತ್ತಿದ್ದು, ರೈತರು ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿ ಡಾ.ಆರ್.ಬಿಜುಕರ್ ಹೇಳಿದರು.

ಇಂದು ಚಟ್ನಳ್ಳಿ ಗ್ರಾಮದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಸ್ವಾಮಿ ವಿವೇಕಾನಂದ ಅವರ ಜಯಂತೋತ್ಸವದ ಪ್ರಯುಕ್ತ ಸ್ಟುಡೆಂಟ್ ಫಾರ್ ಸೇವಾ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಉಚಿತ ಪಶು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರೈತನ ಭೂಮಿಯ ಫಲವತ್ತತೆಗೆ ಜಾನುವಾರುಗಳು ಅತೀ ಮುಖ್ಯವಾಗಿವೆ. ಅವುಗಳ ಸಾಕಾಣಿಕೆ ಹೆಚ್ಚಬೇಕು. ಹೆಚ್ಚಿದ ಪ್ಲಾಸ್ಟಿಕ್ ಬಳಕೆ ಹಾಗೂ ಅವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಕ್ರಮಗಳಿಂದ ಜಾನುವಾರುಗಳ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುತ್ತಿದ್ದು, ರೈತರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.

ಈ ಸಂದರ್ಭದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಜಿಲ್ಲಾಧ್ಯಕ್ಷ ಡಾ. ಸಂತೋಷಕುಮಾರ್ ಹಂಗರಗಿ, ಡಾ.ಜಾಫರ್ ರಮೇಶ್ ಕೊರೆ, ಡಾ.ಸಿದ್ದರಾಮ , ಡಾ.ಆದ್ವೀಶ್, ಆನಂದ್, ನಾಗರಾಜ್ ಹಾಗೂ ಲಿಂಗದೇವ್ ಗುತ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News