ಬೀದರ್ | ದೇಶದ ಸಾಹಿತ್ಯ, ಸಂಸ್ಕೃತಿಯ ಶ್ರೀಮಂತಿಕೆಗೆ ಗ್ರಾಮೀಣ ಜನರ ಭಾಷೆ ಅವಶ್ಯಕ : ಸುಬ್ಬಣ್ಣ ಕರಕನಳ್ಳಿ

Update: 2025-01-13 11:12 GMT

ಬೀದರ್ : ದೇಶದ ಸಾಹಿತ್ಯ ಮತ್ತು ಸಂಸ್ಕೃತಿ ಶ್ರೀಮಂತವಾಗಿಡುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಘ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಇಲ್ಲಿನ ಸಾಹಿತ್ಯ, ಸಂಸ್ಕೃತಿ ಶ್ರೀಮಂತಿಕೆಗೆ ಗ್ರಾಮೀಣ ಜನರ ಭಾಷೆ ಅವಶ್ಯಕವಾಗಿದೆ ಎಂದು ವೀರ ಕನ್ನಡಿಗರ ಸೇನೆ ರಾಜ್ಯ ಸಂಚಾಲಕ ಡಾ.ಸುಬ್ಬಣ್ಣ ಕರಕನಳ್ಳಿ ಅಭಿಪ್ರಾಯಪಟ್ಟರು.

ಇಂದು ಜನವಾಡ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಬಸವಣ್ಣ ಶಿಕ್ಷಣ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೇವಾ ಸಂಸ್ಥೆ ಬೀದರ್ ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ಸಂಘ ಸಂಸ್ಥೆಗಳ ಧನಸಹಾಯ ಸಾಮಾನ್ಯ ಯೋಜನೆಯ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಕರ್ನಾಟಕ ಸಂಭ್ರಮ 51ನೇ ವರ್ಷಕ್ಕೆ ಕಾಲಿಟ್ಟಿದೆ. ಕನ್ನಡವು ಆಡು ಭಾಷೆ, ಆಡಳಿತ ಭಾಷೆ, ಶಿಕ್ಷಣ ಭಾಷೆ ಹಾಗೂ ಉದ್ಯೋಗ ಭಾಷೆಯಾಗಿ ಜನರ ಜೀವನಾಡಿಯಾಗಿದ್ದಾಗ ಮಾತ್ರ ಕನ್ನಡ ಭಾಷೆಯು ಹಸಿರಾಗಿ, ಉಸಿರಾಗಿ ಇಂದಿನ ಮಾಹಿತಿ ತಂತ್ರಜ್ಞಾನದಲ್ಲಿ ಉಳಿದು ಬೆಳೆಯಲಿಕ್ಕೆ ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಂಕರ ಚೊಂಡಿ ಮತ್ತು ತಂಡದವರು ಸಾಂಸ್ಕೃತಿಕ ನಾಟಕ ಜಾನಪದ, ಝರೇಮ್ಮಾ ತಂಡದವರು ತತ್ವಪದ, ಮಲ್ಲಮ್ಮಾ ಬುಲಾಯಿ ಹಾಡು ಹಾಡಿದರೆ, ರಾಜಕುಮಾರ ಹಂತಿ ಪದ ಹಾಡಿದರು.

ಈ ಸಂದರ್ಭದಲ್ಲಿ ಬಿ ವ್ಹಿ ಬಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಮಾರುತಿ ಜ್ಯಾನಕೆ, ಬಸವಣ್ಣ ಶಿಕ್ಷಣ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ್ ಖಂಡ್ರೆ, ಮುಖ್ಯ ಗುರು ಪ್ರತಿಭಾ, ಎಸ್ ಡಿ ಎಂ ಸಿ ಅಧ್ಯಕ್ಷ ಶಿವಾಜಿ ವೇಂಕಟರಾವ್, ಬಸವರಾಜ್ ಪಂಸಾಲೆ, ಗ್ರಾಮ ಪಂಚಾಯತ್ ಸದಸ್ಯ ಸುಮನ್ ಗಣಪತಿ, ಪ್ರದೀಪ್ ನಾಟೇಕರ್ ಹಾಗೂ ಭೀಮರಾವ್ ಮಾಲಗತ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News