ಬೀದರ್ | ಮಕ್ಕಳ ಸರ್ವಾಂಗಿಣ ಬೆಳವಣಿಗೆಯಲ್ಲಿ ಪಾಲಕರು, ಶಿಕ್ಷಕರು ಮಾರ್ಗದರ್ಶನ ನೀಡುವುದು ಅವಶ್ಯಕ : ವಿಜಯಕುಮಾರ್ ಪಾಟೀಲ್

Update: 2025-01-13 12:31 GMT
Photo of Program
  • whatsapp icon

ಬೀದರ್ : ಮಕ್ಕಳ ಸರ್ವಾಂಗಿಣ ಬೆಳವಣಿಗೆಯಲ್ಲಿ ಉತ್ತಮ ಸಂಸ್ಕೃತಿ, ಸಂಸ್ಕಾರ ಹಾಗೂ ಆಚಾರ ವಿಚಾರವಂತಿಕೆ ಬೆಳೆಸಬೇಕು ಎಂದರೆ ಮಕ್ಕಳಿಗೆ ಪಾಲಕರು ಮತ್ತು ಶಿಕ್ಷಕರು ಮಾರ್ಗದರ್ಶನ ನೀಡುವುದು ಅವಶ್ಯಕವಾಗಿದೆ ಎಂದು ಗಾಂಧಿಗಂಜ್ ಕೋ. ಆಪರೇಟಿವ್ ಬ್ಯಾಂಕ್ ನ ಅಧ್ಯಕ್ಷ ವಿಜಯಕುಮಾರ್ ಪಾಟೀಲ್ ಅವರು ಅಭಿಪ್ರಾಯ ಪಟ್ಟರು.

ನಗರದ ಪ್ರಸಾದ ನಿಲಯದಲ್ಲಿ ʼ170ನೇ ಅನುಭವ ಮಂಟಪ ತಿಂಗಳ ಕಾರ್ಯಕ್ರಮʼ ಉದ್ಘಾಟಿಸಿ ಮಾತನಾಡಿದ ಅವರು, ತಾಂತ್ರಿಕ ಜಗತ್ತಿನಲ್ಲಿ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಮತ್ತು ಅಧ್ಮಾತ್ಮಿಕ ಕೊರತೆ ಇದೆ. ಇದರಿಂದ ಸಮಾಜದಲ್ಲಿ ಅನಾಹುತ, ಮೋಸ, ವಂಚನೆ ಹೆಚ್ಚಾಗುತ್ತಿವೆ. ಪಾಲಕರು ಮತ್ತು ಶಿಕ್ಷಕರು ಮಕ್ಕಳಲ್ಲಿ ನೈತಿಕ, ಅಧ್ಯಾತ್ಮಿಕ, ಸಹನಶೀಲತೆ ಹಾಗೂ ವಿನಯಶೀಲತೆ ಬೆಳೆಸಬೇಕು ಎಂದರು.

ಹೀರೆಮಠ ಸಂಸ್ಥಾನದ ಪಿಠಾಧೀಶ್ವರಾದ ಶ್ರೀ ಗುರುಬಸವ ಪಟ್ಟದೇವರು ಮಾತನಾಡಿ, ನಾವು ಮಾಡುವ ಸೇವೆಯಲ್ಲಿ ನಿಸ್ವಾರ್ಥತೆ ಇರಬೇಕು, ತೋರಿಕೆ ಇರಬಾರದು ಎಂದು ಬಸವಣ್ಣನವರು ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಮಾನವನು ಶಾಂತಿ, ಸಮಾಧಾನ, ನೆಮ್ಮದಿಯಿಂದ ಬದುಕು ಸಾಗಬೇಕಾದರೆ ಶರಣರ ವಚನ ಸಾಹಿತ್ಯ ಅಧ್ಯಯನ ಮಾಡಿ ಆ ತತ್ವದಂತೆ ನಡೆಯಬೇಕೆಂದು ನುಡಿದರು.

ಈ ಸಂದರ್ಭದಲ್ಲಿ ಅಥಣಿ ತಾಲೂಕಿನ ಅಲ್ಲಮಪ್ರಭು ಮಠದ ಮಲ್ಲಿಕಾರ್ಜುನ ಮಹಾಸ್ವಾಮಿ, ಮಹಾಲಿಂಗ ಮಹಾಸ್ವಾಮಿ, ಪ್ರಸಾದ ನಿಲಯದ ಕಾರ್ಯದರ್ಶಿ ಪ್ರೊ.ಎಸ್.ಬಿ.ಬಿರಾದಾರ್, ಗಾಂಧಿಗಂಜ್ ಕೋ.ಆಪರೇಟಿವ ಬ್ಯಾಂಕಿನ ನಿರ್ದೇಶಕ ವಿಶ್ವನಾಥ್ ಕಾಜಿ, ಶಾರಾದ ಕಾಜಿ, ಮಲ್ಲಮ್ಮಾ ಬಸವಣಪ್ಪಾ, ಸುವರ್ಣಾ ಚಿಮಕೋಡೆ, ಪ್ರಸಾದ ನಿಲಯದ ಸಂಚಾಲಕ ಪ್ರೊ.ಉಮಾಕಾಂತ ಮೀಸೆ ಹಾಗೂ ಉಮಾದೇವಿ ಮಾಳಗೆ ಸೇರಿದಂತೆ ಪ್ರಸಾದ ನಿಲಯದ ವಿದ್ಯಾರ್ಥಿಗಳು ಹಾಗೂ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದ ಮಕ್ಕಳು ಭಾಗವಹಿಸಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News