ಬೀದರ್ | ದಲಿತ್ ಯೂನಿಟಿ ಮೂವ್‌ಮೆಂಟ್ ನ ರಾಜ್ಯಾಧ್ಯಕ್ಷರಾಗಿ ಪ್ರಕಾಶ್ ರಾವಣ್ ನೇಮಕ
Update: 2025-03-16 15:45 IST

ಬೀದರ್ : ದಲಿತ್ ಯೂನಿಟಿ ಮೂವಮೆಂಟ್ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಪ್ರಕಾಶ್ ರಾವಣ್ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ಸಂಸ್ಥಾಪಕ ವಿನೋದ್ ರತ್ನಾಕರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶನಿವಾರ ಸಂಘಟನೆಯ ಅಧ್ಯಕ್ಷರ ಚುನಾವಣೆಯು ಶಾಂತಿ ಹಾಗೂ ಸೌಹಾರ್ದತೆಯಿಂದ ನಡೆಯಿತು. ಚುನಾವಣೆಯಲ್ಲಿ ಒಟ್ಟು 37 ಮತದಾರರು ಮತ ಚಲಾಯಿಸಿದ್ದು, ಪ್ರಕಾಶ್ ರಾವಣ 26 ಮತ ಪಡೆದು ವಿಜಯರಾದರು. ಗೌತಮ್ ದೊಡ್ಡಿ ಡಾಕುಳಗಿ ಅವರು 11 ಮತ ಪಡೆದು ಎರಡನೇ ಸ್ಥಾನದಲ್ಲಿದ್ದರು ಎಂದು ಅವರು ತಿಳಿಸಿದ್ದಾರೆ.
ಅಂಬೇಡ್ಕರ್ ಮತ್ತು ಕಾನ್ಶೀರಾಮ್ ಅವರ ಬಹುಜನ ತತ್ವ ಅನುಸರಿಸಿ, ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯತತ್ವನ್ನು ಸ್ಥಾಪಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸಂಘಟನೆ ಕಾರ್ಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಶ್ರೀಕಾಂತ್ ಮೂಲಭಾರತಿ, ದಿಲೀಪ್ ಚಂದಾ ಹಾಗೂ ಪ್ರವೀಣ್ ರತ್ನಾಕರ್ ಸೇರಿದಂತೆ ಸಂಘಟನೆಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.