ಒಳಮೀಸಲಾತಿ ಬಲಗೈ ಪಂಗಡದಿಂದ ಬೆಂಗಳೂರು ಚಲೋ ಕರಪತ್ರ ಬಿಡುಗಡೆ

Update: 2025-03-15 22:24 IST
ಒಳಮೀಸಲಾತಿ ಬಲಗೈ ಪಂಗಡದಿಂದ ಬೆಂಗಳೂರು ಚಲೋ ಕರಪತ್ರ ಬಿಡುಗಡೆ
  • whatsapp icon

ಬೀದರ್ : ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಬಲಗೈ ಪಂಗಡಗಳ ಒಕ್ಕೂಟದಿಂದ ಬೆಂಗಳೂರು ಚಲೋ ಕರಪತ್ರ ಬಿಡುಗಡೆ ಮಾಡಲಾಯಿತು.

ಇಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ, ಮಾ.23 ರಂದು ಬೆಂಗಳೂರು ನಗರದ ವಸಂತ ನಗರದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏಕ ಸದಸ್ಯ ವಿಚಾರಣ ಆಯೋಗದ ಅಧ್ಯಕ್ಷರಾದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನದಾಸ್ ಮತ್ತು ಬಲಗೈ ಪಂಗಡ ಸಚಿವರಿಗೆ ಒಳಮೀಸಲಾತಿ ಕುರಿತು ಅಕ್ಷೇಪಣ ಮನವಿ ಸಲ್ಲಿಸಲು ಬೆಂಗಳೂರು ಚಲೋ ಕರ ಪತ್ರ ಬಿಡುಗಡೆ ಮಾಡಲಾಗಿದೆ.

ಸಮಿತಿಯ ಅಧ್ಯಕ್ಷ ಅನೀಲಕುಮಾರ್ ಬೆಲ್ದಾರ್ ಅವರು ಕರಪತ್ರ ಬಿಡುಗಡೆ ಮಾಡಿ ಮಾತನಾಡಿ, ಒಳಮೀಸಲಾತಿಯಲ್ಲಿ 1 ಪ್ರತೀಶತ ಬಲಗೈ ಸಮುದಾಯಕ್ಕೆ ಗೊಂದಲ ಆಗಿರುವುದರಿಂದ ದಲಿತ ಸಂಘಟನೆಯ ಎಲ್ಲಾ ಮುಖಂಡರುಗಳು ಸೇರಿ ಮಾ.23 ರಂದು ನಡೆಯುವ ಆಯೋಗದ ಅಧ್ಯಕ್ಷ ನಾಗಮೋಹನದಾಸ ಅವರಿಗೆ ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ ಕುರಿತು ಆಕ್ಷೇಪಣೆ ಸಲ್ಲಿಸಲು ಬೀದರ ದಿಂದ 200 ಜನ ಮುಖಂಡರು ಬೆಂಗಳೂರಿಗೆ ಹೋಗುತ್ತಿದ್ದೇವೆ ಎಂದು ಹೇಳಿದರು.

ಬಲಗೈ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯದ ಕುರಿತು ಬಲಗೈ ಸಮುದಾಯದ ಎಲ್ಲಾ ಸಚಿವರಿಗೆ ಸಮುದಾಯದ ಪರವಾಗಿ ಮಾತನಾಡಲು ಮನವಿ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಮೀತಿಯ ಮಹಾ ಪ್ರಧಾನ ಕಾರ್ಯದರ್ಶಿ ರಮೇಶ್ ಡಾಕುಳಗಿ, ಕಾರ್ಯಾಧ್ಯಕ್ಷ ರವಿ ಗಾಯಕವಾಡ್, ವಿನೋದ್ ಅಪ್ಪೆ, ಶ್ರೀಕಾಂತ್ ದೀನೆ, ಬಾಬುರಾವ್ ಪಾಸ್ವಾನ್, ಶಿವುಕುಮಾರ್ ನೀಲಿಕಟ್ಟಿ, ಪ್ರಾಧಾನ ಕಾರ್ಯದರ್ಶಿ ಪ್ರದೀಪ್ ನಾಟೇಕರ್, ಜಿಲ್ಲಾ ಸಂಯೋಜಕ ಅಂಬಾದಾಸ್ ಗಾಯಕವಾಡ್, ಜಿಲ್ಲಾ ಖಂಜಾಚಿ ಸಂದೀಪ್ ಕಾಂಟೆ, ಪ್ರಶಾಂತ್ ದೊಡ್ಡಿ ಹಾಗೂ ರಮೇಶ್ ಮಂದಕನಳ್ಳಿ ಸೇರಿದಂತೆ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News