ಬೀದರ್ | ಬಾವಿಗಿಳಿದ ಇಬ್ಬರು ಯುವಕರು ಮೃತ್ಯು
Update: 2025-03-16 15:24 IST

ಮೃತ ಯುವಕರು
ಬೀದರ್ : ಬಾವಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಚಿಟಗುಪ್ಪಾ ತಾಲ್ಲೂಕಿನ ವಿಠಲಪುರ್ ಗ್ರಾಮದಲ್ಲಿ ನಡೆದಿದೆ.
ವಿಠಲಪುರ್ ಗ್ರಾಮದ ನಿವಾಸಿ ಪ್ರಶಾಂತ್ (22) ಹಾಗೂ ಬಸವಕಲ್ಯಾಣ ತಾಲ್ಲೂಕಿನ ದಾಸರವಾಡಿ ಗ್ರಾಮದ ನಿವಾಸಿ ಶಿವಾಜಿ (20) ಮೃತಪಟ್ಟ ಯುವಕರು ಎಂದು ತಿಳಿದು ಬಂದಿದೆ.
ಮೃತರು ಶನಿವಾರ ಗೆಳೆಯರೊಂದಿಗೆ ಈಜಲು ಬಾವಿಗೆ ಹೋಗಿದ್ದರು. ಈಜಾಡುವಾಗ ಒಬ್ಬ ಯುವಕ ಮುಳುಗುತ್ತಿರುವುದನ್ನು ನೋಡಿ ಇನ್ನೊಬ್ಬ ಯುವಕ ರಕ್ಷಣೆ ಮಾಡಲು ಹೋಗಿದ್ದು, ಇಬ್ಬರು ಕೂಡ ಬಾವಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಬೇಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.