ಬೀದರ್ | ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯ ಅತಿಥಿ ಉಪನ್ಯಾಸಕರ ಸಭೆ, ನೂತನ ತಾಲ್ಲೂಕು ಪದಾಧಿಕಾರಿಗಳ ನೇಮಕ

Update: 2025-03-16 17:54 IST
Photo of Program
  • whatsapp icon

ಬೀದರ್ : ಔರಾದ್‌ (ಬಾ) ತಾಲ್ಲೂಕಿನ ಸರ್ಕಾರಿ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಶನಿವಾರ ಅತಿಥಿ ಉಪನ್ಯಾಸಕರ ಸಭೆ ಜರುಗಿದ್ದು, ಕರ್ನಾಟಕ ರಾಜ್ಯ ಸರ್ಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ನೂತನ ತಾಲ್ಲೂಕು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ಔರಾದ್ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಆಶೀಷಕುಮಾರ್ ಶೇಳಕೆ, ಉಪಾಧ್ಯಕ್ಷರಾಗಿ ಶಾಂತಕುಮಾರ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪರಾಜ್ ಖರಾತ್, ಜಂಟಿ ಕಾರ್ಯದರ್ಶಿಯಾಗಿ ಶಿವಕುಮಾರ್ ಹಾಗೂ ಪೂರ್ಣಿಮಾ, ಸಂಘಟನಾ ಕಾರ್ಯದರ್ಶಿಯಾಗಿ ಅನೀಲ್, ಸುಮಿತಾ ಹಾಗೂ ಲೂಸಿ, ಕೋಶಾಧ್ಯಕ್ಷರಾಗಿ ಅಭಿಷೇಕ್, ಸಲಹೆಗಾರರಾಗಿ ಸಂದೀಪ್ ಕುಲಕರ್ಣಿ, ಬಾಲಾಜಿ, ಅಶ್ವಿನಿ ಲಕ್ಕಾ, ರಾಣಿ, ಸದಸ್ಯರಾಗಿ ಸಂತೋಷಿ, ಆರತಿ ಹಾಗೂ ಅಂಬಿಕಾ ಇವರನ್ನು ನೇಮಕ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಪ್ರವೀಣಕುಮಾರ್ ಮೀರಾಗಂಜಕರ್ ಮಾತನಾಡಿ, ನಮ್ಮ ಸಮಸ್ಯೆಗಳು ದೂರ ಮಾಡಲು ಹಾಗೂ ನಮ್ಮ ಹಕ್ಕುಗಳನ್ನು ಪಡೆಯಲು ಸಂಘ ಅತ್ಯಂತ ಅವಶ್ಯಕವಾಗಿದೆ. ನಾವೆಲ್ಲರೂ ಸಂಘಟಿತರಾಗಿರಬೇಕು. ಏನೇ ಸಮಸ್ಯೆಗಳು ಎದುರಾದಾಗ ನಮ್ಮ ಸಂಘ ಸಂಪೂರ್ಣ ತಮ್ಮ ಜೊತೆಗೆ ಇರುತ್ತದೆ. ನಾವೆಲ್ಲರೂ ಒಗ್ಗಟ್ಟಾಗಿ ಎದುರಿಸೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಜಂಟಿ ಕಾರ್ಯದಶಿ ಸಂತೋಷ್ ಲದ್ದೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್ ದೇಸಾಯಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೀರ್ತಿ, ಜಿಲ್ಲಾ ಕೋಶಾಧ್ಯಕ್ಷ ಅಶ್ವಿನಿ ಮತ್ತು ಸುನೀಲ್ ಸೇರಿದಂತೆ ಔರಾದ್ ಪಾಲಿಟೆಕ್ನಿಕ್ ಕಾಲೇಜಿನ ಅತಿಥಿ ಉಪನ್ಯಾಸಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News