ಬೀದರ್: ಕಾನ್ಶಿರಾಂ ಜಯಂತಿ ಆಚರಣೆ

ಬೀದರ್: ದಾದಾಸಾಹೇಬ್ ಕಾನ್ಶಿರಾಂ ಅವರ 91ನೇ ಜಯಂತಿಯ ನಿಮಿತ್ಯ ನಗರದ ಗಾಂಧಿ ಗಂಜ್ ನ ನಾಗಲೋಕ್ ಬುದ್ಧ ವಿಹಾರದಲ್ಲಿ ವಿಚಾರ ಸಂಕಿರ್ಣ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಕಪಿಲ್ ಗೋಡಬೋಲೆ ಅವರು ಮಾತನಾಡಿ, ಈ ದೇಶದ ಬಹುಜನರನ್ನು ವಂಚಿಸುತ್ತ ಬಂದಿರುವ ಕಾಂಗ್ರೆಸ್ ಹಾಗೂ ಬಿಜೆಪಿಯಂಥ ಮನುವಾದಿ ಪಾರ್ಟಿಗಳನ್ನು ಧಿಕ್ಕರಿಸುವ ಮೂಲಕ ನಮಗೆ ಮತಾಧಿಕಾರ ಒದಗಿಸಿಕೊಟ್ಟ ಡಾ. ಅಂಬೇಡ್ಕರ್ ಅವರ ಸಿದ್ಧಾಂತದಲ್ಲಿ ನಡೆಯುತ್ತಿರುವ ಏಕೈಕ ಪಕ್ಷವಾದ ಬಹುಜನ ಸಮಾಜ ಪಕ್ಷ ಗೆಲ್ಲಿಸೋಣ. ಎಸ್. ಸಿ, ಎಸ್.ಟಿ, ಒ.ಬಿ.ಸಿ ಹಾಗೂ ಅಲ್ಪಸಂಖ್ಯಾತರನ್ನು ಒಳಗೊಂಡ ಈ ಬಹುಜನ ಸಮಾಜದ ಶಕ್ತಿ ಮತಪೆಟ್ಟಿಗೆಗಳ ಮೂಲಕ ಮನುವಾದಿಗಳಿಗೆ ತೋರಿಸೋಣ ಎಂದು ಹೇಳಿದರು.
ಕಾನ್ಷೀರಾಂ ಅವರು ಕಂಡ ಕನಸಿಗೆ ನಾವೆಲ್ಲ ಕೈಜೋಡಿಸೋಣ. ಇದೀಗ ಮುಂದೆ ಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಗಳಿಗೆ ಮತ ನೀಡುವ ಮೂಲಕ ದೇಶದ ಆಡಳಿತ ಚುಕ್ಕಾಣಿ ನಮ್ಮ ಕೈಗೆ ತೆಗೆದುಕೊಳ್ಳೋಣ ಎಂದರು.
ಈ ಸಂದರ್ಭದಲ್ಲಿ ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಜ್ಞಾನೇಶ್ವರ್ ಸಿಂಗಾರೆ, ಅಶೋಕ್ ಮಂಠಾಳ್ಕರ್, ಪಕ್ಷದ ಜಿಲ್ಲಾ ಉಸ್ತುವಾರಿ ಜಾಫರ್ ಖುರೇಶಿ, ಉಪಾಧ್ಯಕ್ಷ ಡಾ. ಸಚಿನ್ ಗಿರಿ, ಜಿಲ್ಲಾ ಕಾರ್ಯದರ್ಶಿ ಅಂಬಾದಾಸ್ ಚಕ್ರವರ್ತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಕ್ತಿಕಾಂತ್ ಭಾವವಿದೊಡ್ಡಿ, ಮಲ್ಲಿಕಾರ್ಜುನ್ ಕಪಲಾಪುರೆ, ಪ್ರಫುಲಕುಮಾರ್, ಮಹೇಶ್ ಭೋಲಾ, ಪ್ರೇಮ್ ಶೇಂಕೆ ಹಾಗೂ ಗೌತಮ್ ಡಾಕುಳಗಿ ಸೇರಿದಂತೆ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.