ಬೀದರ್ | ಅಗ್ನಿವೀರ್ ಭೂಸೇನಾ ನೇಮಕಾತಿಗೆ ಅನ್‌ಲೈನ್ ನೋಂದಣಿ ಪ್ರಾರಂಭ

Update: 2025-03-17 20:33 IST
ಬೀದರ್ | ಅಗ್ನಿವೀರ್ ಭೂಸೇನಾ ನೇಮಕಾತಿಗೆ ಅನ್‌ಲೈನ್ ನೋಂದಣಿ ಪ್ರಾರಂಭ
  • whatsapp icon

ಬೀದರ್ : ಬೆಳಗಾವಿಯ ಆರ್ಮಿ ರಿಕ್ರೂಟಿಂಗ್ ಆಫೀಸ್ ಹಾಗೂ ಬೆಂಗಳೂರು ಮುಖ್ಯ ಕಚೇರಿಯ ರಿಕ್ರೂಟಿಂಗ್ ಜೋನ್ ಇವರ ಸಹಯೋಗದಲ್ಲಿ ಅಗ್ನಿವೀರ್ ಭೂಸೇನಾ ನೇಮಕಾತಿಗೆ ಅನ್‌ಲೈನ್ ನೋಂದಣಿ ಪ್ರಾರಂಭಿಸಲಾಗಿದೆ ಎಂದು ರಿಕ್ರೂಟಿಂಗ್ ಡೈರೆಕ್ಟರ್ ಕರ್ನಲ್ ಎ.ಕೆ ಉಪಾಧ್ಯಾಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ.12 ರಿಂದ ಏ.10 ರವರೆಗೆ ಅಗ್ನಿವೀರ್ ಆನ್‌ಲೈನ್ ನೋಂದಣಿ ಆರಂಭಿಸಿದ್ದು, ಜಾಯಿನ್ ಇಂಡಿಯನ್ ಆರ್ಮಿ ವೆಬ್‌ಸೈಟ್ www.joinindianarmy.nic.in ನಲ್ಲಿ ರ‍್ಯಾಲಿ ಮೂಲಕ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಅಗ್ನಿವೀರ್ ಜನರಲ್ ಡ್ಯೂಟಿ, ಅಗ್ನಿವೀರ್ ಟೆಕ್ನಿಕಲ್, ಅಗ್ನಿವೀರ್, ಟ್ರೇಡ್‌ಮನ್ ಹುದ್ದೆಗಳಿಗೆ 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಗ್ನಿವೀರ್, ಟ್ರೇಡ್‌ಮನ ಹುದ್ದೆಗೆ 8ನೇ ತರಗತಿ ಪಾಸ್ ಆಗಿರಬೇಕು. ಅಗ್ನಿವೀರ್ ಕ್ಲರ್ಕ್, ಸ್ಟೋರ್‌ ಕೀಪರ್, ಟೆಕ್ನಿಕಲ್ ವಿಭಾಗಗಳಿಗೆ ನೇಮಕಾತಿ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ವಯೋಮಿತಿ, ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾಹಿತಿಗಾಗಿ ಮಾ.12 ರಂದು ಬೆಳಗಾವಿಯ ಆರ್ಮಿ ರಿಕ್ರೂಟಿಂಗ್ ಆಫೀಸಸಿನಿಂದ ಹೊರಡಿಸಿದ ಅಧಿಸೂಚನೆ ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News