ಬೀದರ್ | ಆಕಸ್ಮಿಕ ಬೆಂಕಿ; ಹೊತ್ತಿ ಉರಿದ ಲಾರಿ
Update: 2025-03-18 23:25 IST

ಬೀದರ್ : ಸೋಯಾ ಹಾಗೂ ಅವರೆಕಾಯಿಯ ಹೊಟ್ಟು ತುಂಬಿದ ಲಾರಿಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಲಾರಿ ಹೊತ್ತಿ ಉರಿದ ಘಟನೆ ಬಸವಕಲ್ಯಾಣ ತಾಲ್ಲೂಕಿನ ತಾಡೋಳಾ ಗ್ರಾಮದ ಹತ್ತಿರ ನಡೆದಿದೆ.
ಇಂದು ರಾತ್ರಿ ಸುಮಾರು 9 ಗಂಟೆಗೆ ತಾಡೋಳಾ ಗ್ರಾಮದ ರಸ್ತೆ ಮೇಲೆ ಹೊಟ್ಟು ತುಂಬಿದ ಲಾರಿ ನಿಂತಿತ್ತು. ಆಕಸ್ಮಿಕವಾಗಿ ಬೆಂಕಿ ಬಿದ್ದು ಉರಿಯಲಾರಂಭಿಸಿತು. ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ.
ಘಟನಾ ಸ್ಥಳಕ್ಕೆ ಬಸವಕಲ್ಯಾಣ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.