ಆಸ್ತಿ ರಕ್ಷಣೆ ಕೋರಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಪ್ರಮೋದಾದೇವಿ ಒಡೆಯರ್ ಪತ್ರ

Update: 2025-04-08 00:13 IST
ಆಸ್ತಿ ರಕ್ಷಣೆ ಕೋರಿ ಚಾಮರಾಜನಗರ ಜಿಲ್ಲಾಧಿಕಾರಿಗೆ ಪ್ರಮೋದಾದೇವಿ ಒಡೆಯರ್ ಪತ್ರ

ಪ್ರಮೋದಾದೇವಿ ಒಡೆಯರ್

  • whatsapp icon

ಚಾಮರಾಜನಗರ : ಮೈಸೂರು ಜಿಲ್ಲೆಯಿಂದ ವಿಭಜನೆಗೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಿಗೆ ಸೇರಿರುವ ಸಾವಿರಾರು ಎಕರೆ ಜಮೀನು ಮತ್ತು ಕಟ್ಟಡಗಳನ್ನು (ಖಾಸಗಿ ಸೊತ್ತು) ಮೈಸೂರು ಸಂಸ್ಥಾನದವರಿಗೆ ಖಾತೆಯಾಗುವ ತನಕ ಸದರಿ ಜಮೀನುಗಳಲ್ಲಿ ಯಾವುದೇ ರೀತಿಯ ಖಾತೆ, ಕಂದಾಯ ಗ್ರಾಮ ಇನ್ನಿತರ ಯಾವುದೇ ವಹಿವಾಟುಗಳನ್ನು ನಡೆಸದಂತೆ ಚಾಮರಾಜನಗರ ಜಿಲ್ಲಾಡಳಿತಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಮೈಸೂರು ರಾಜ ವಂಶಸ್ಥೆ ಪ್ರಮೋದಾದೇವಿಯವರು ಚಾಮರಾಜನಗರ ಜಿಲ್ಲಾಧಿಕಾರಿ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮತ್ತು ಚಾಮರಾಜನಗರ ತಹಶೀಲ್ದಾರ್, ಭೂ ದಾಖಲೆಗಳ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರಿಗೆ ಮಾ.20ರಂದು ರಾಜವಂಶಸ್ಥೆ ಪ್ರಮೋದಾದೇವಿ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಜ.6, 1950ರಂದು ಮೈಸೂರು ಮಹಾರಾಜರು ಹಾಗೂ ಅಂದಿನ ಕೇಂದ್ರ ಸರ್ಕಾರದ ನಡುವಿನ ಒಪ್ಪಂದದಂತೆ ಚಾಮರಾಜನಗರ ಜಿಲ್ಲೆಯ ಹಲವು ಗ್ರಾಮಗಳಲ್ಲಿ, ಹಲವು ಸರ್ವೇ ನಂಬರ್‌ಗಳಲ್ಲಿರುವ 5,119 ಎಕರೆ 9 ಗುಂಟೆ ಜಮೀನು ಮಹಾರಾಜರಿಗೆ ಸೇರಿದ ಖಾಸಗಿ ಸ್ವತ್ತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಚಾಮರಾಜನಗರ ಜಿಲ್ಲೆಯ ಈ ಕೆಳಕಂಡ ಗ್ರಾಮಗಳ ಸರ್ವೇ ನಂ. ಮತ್ತು ವಿಸ್ತೀರ್ಣ ಸೊತ್ತುಗಳು ಮೈಸೂರು ಮಹಾರಾಜರ ಖಾಸಗಿ ಸೊತ್ತು ಎಂದು ಒಪ್ಪಂದವಾಗಿರುತ್ತದೆ ಎಂದು ಪತ್ರದಲ್ಲಿ ಬರೆದು ಗ್ರಾಮಗಳ ಹೆಸರು, ಸರ್ವೇ ನಂಬರ್, ವಿಸ್ತೀರ್ಣವನ್ನು ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಇದರಂತೆ ಇಂದಿನ ಚಾಮರಾಜನಗರ ತಾಲೂಕಿನ ಅಟ್ಟಗೂಳಿಪುರ (ವಿಸ್ತೀರ್ಣ 4445 -33), ಹರದನಹಳ್ಳಿ (ಸರ್ವೇ ನಂ.125, ವಿಸ್ತೀರ್ಣ40-18), ಹರದನಹಳ್ಳಿ (ಸರ್ವೇ ನಂ.124, ವಿಸ್ತೀರ್ಣ 3-16), ಹರದನಹಳ್ಳಿ (ಸರ್ವೇ ನಂ.134, ವಿಸ್ತೀರ್ಣ 2-19), ಹರದನಹಳ್ಳಿ (ಸರ್ವೇ ನಂ.135, ವಿಸ್ತೀರ್ಣ 1-35), ಹರದನಹಳ್ಳಿ(ಸರ್ವೇ ನಂ.133, ವಿಸ್ತೀರ್ಣ 67-20), ಹರದನಹಳ್ಳಿ(ಸರ್ವೇ ನಂ.463, ವಿಸ್ತೀರ್ಣ 11-08), ಹರದನಹಳ್ಳಿ(ಸರ್ವೇ ನಂ.169, ವಿಸ್ತೀರ್ಣ2-04), ಹರದನಹಳ್ಳಿ(ಸರ್ವೇ ನಂ.184, ವಿಸ್ತೀರ್ಣ 1-03), ಬೂದಿತಿಟ್ಟು (ಸರ್ವೇ ನಂ.117, ವಿಸ್ತೀರ್ಣ63-39), ಕರಡಿಹಳ್ಳ(ಸರ್ವೇ ನಂ1, ವಿಸ್ತೀರ್ಣ13-36), ಕರಡಿ ಹಳ್ಳ (ಸರ್ವೇ ನಂ2, ವಿಸ್ತೀರ್ಣ24-16),  ಕರಡಿಹಳ್ಳ(ಸರ್ವೇ ನಂ3, ವಿಸ್ತೀರ್ಣ 38-11), ಕನ್ನಿಕೆರೆ (ಸರ್ವೇ ನಂ1, ವಿಸ್ತೀರ್ಣ 32-35), ಕನ್ನಿಕೆರೆ(ಸರ್ವೇ ನಂ2, ವಿಸ್ತೀರ್ಣ67-10), ಕನ್ನಿಕೆರೆ(ಸರ್ವೇ ನಂ.3, ವಿಸ್ತೀರ್ಣ 89-39), ಉಮ್ಮತ್ತೂರು(ಸರ್ವೇ ನಂ.563, ವಿಸ್ತೀರ್ಣ 199-27) ಇಷ್ಟೂ ಸೊತ್ತಿನ ಷರಾ ಮಹಾರಾಣಿಯವರ ಆಸ್ತಿಯಾಗಿದೆ. ಕಸಬಾ ಚಾಮರಾಜನಗರ (ಷರಾ ಜನನ ಮಂಟಪ ಮತ್ತು ಗಾರ್ಡನ್), ಬಸವಪುರ(ಸರ್ವೇ ನಂ 143, ವಿಸ್ತೀರ್ಣ 13) ಈ ಸೊತ್ತುಗಳು 1950 ಜ.26ರ ಒಪ್ಪಂದ ಪ್ರಕಾರ ಮಹಾರಾಜರ ಖಾಸಗಿ ಸೊತ್ತಾಗಿರುತ್ತದೆ ಎಂದು ತಕರಾರು ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಮೋದಾದೇವಿ ಒಡೆಯರ್ ಅವರು ಪತ್ರದಲ್ಲಿ ಉಲ್ಲೇಖಿಸಿರುವ ಈ ಸೊತ್ತುಗಳಲ್ಲಿ ಯಾವುದೇ ರೀತಿಯ ಖಾತೆ, ದುರಸ್ತಿ ಮತ್ತು ಯಾವುದೇ ರೀತಿಯ ವಹಿವಾಟುಗಳನ್ನು ನಡೆಸದಂತೆ ಈ ಮನವಿಯನ್ನೇ ತಕರಾರು ಮನವಿ ಎಂದು ಪರಿಗಣಿಸಿಕೊಂಡು ತಮ್ಮ ಹೆಸರಿಗೆ ಖಾತೆ ಮಾಡಿಕೊಡುವಂತೆ ಕೋರಿದ್ದಾರೆ.

ಇತ್ತೀಚಿನ ಮಾಹಿತಿಯಂತೆ ತಾವು ಪತ್ರದಲ್ಲಿ ಸೂಚಿಸಿರುವ ಗ್ರಾಮಗಳಲ್ಲಿ ಕಂದಾಯ ಗ್ರಾಮಗಳಾಗಿ ರಚನೆ ಮಾಡುತ್ತಿರುವುದು ಕಂಡು ಬಂದಿದ್ದು, ಸದರಿ ಸೊತ್ತುಗಳು ಮಹಾರಾಜರ ಖಾಸಗಿ ಸ್ವತ್ತಾಗಿರುವುದರಿಂದ ಯಾವುದೇ ರೀತಿಯ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸದಂತೆಯೂ ಈ ತಕರಾರು ಅರ್ಜಿ ಯನ್ನು ಸಲ್ಲಿಸುತ್ತಿದ್ದು, ಈ ಮನವಿಯನ್ನು ಪರಿಗಣಿಸುವಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯ‌ರ್ ಕೋರಿದ್ದಾರೆ.

ಮೈಸೂರು ಸಂಸ್ಥಾನದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಂದ ಮಾರ್ಚ್ 21 ರಂದು ಅರ್ಜಿ ಬಂದಿದೆ. ಇದನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಚಾಮರಾಜನಗರ ತಾಲೂಕು ತಹಶೀಲ್ದಾರ್ ಗಿರಿಜಾ ಅವರಿಗೆ ಸೂಚನೆ ನೀಡಿದ್ದಾರೆ.

-ಮಹೇಶ್, ಉಪ ವಿಭಾಗಾಧಿಕಾರಿ, ಕೊಳ್ಳೇಗಾಲ 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News