ಕುದುರೆಮುಖ: ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಆರೋಪದಲ್ಲಿ ನಾಲ್ವರ ಬಂಧನ

Update: 2025-03-23 21:22 IST
ಕುದುರೆಮುಖ: ಮೀಸಲು ಅರಣ್ಯಕ್ಕೆ ಬೆಂಕಿ ಹಚ್ಚಿದ್ದ ಆರೋಪದಲ್ಲಿ ನಾಲ್ವರ ಬಂಧನ
  • whatsapp icon

ಚಿಕ್ಕಮಗಳೂರು: ಜಿಲ್ಲೆಯ ಕುದುರೆಮುಖ ವನ್ಯಜೀವಿ ವಲಯದ ತುಂಗಭದ್ರಾ ಮೀಸಲು ಅರಣ್ಯ ಪ್ರದೇಶದಲ್ಲಿ ಅರಣ್ಯಕ್ಕೆ ಬೆಂಕಿ ನೀಡಿದ ಆರೋಪದ ಮೇರೆಗೆ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂದಿಸಿರುವ ಘಟನೆ ರವಿವಾರ ವರದಿಯಾಗಿದೆ.

ದೇವರಾಜ್, ಗಗನ್, ರಕ್ಷಣ್, ಉಮೇಶ್ ಬಂಧಿತ ಆರೋಪಿಗಳಾಗಿದ್ದು, ಈ ಆರೋಪಿಗಳು ರವಿವಾರ ಕಳಸ ತಾಲೂಕಿನ ಕುದುರೆಮುಖ ವನ್ಯಜೀವಿ ವಲಯದ ಕಳಕೋಡು ವ್ಯಾಪ್ತಿಯ ತುಂಗಭದ್ರ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಲ್ಲದೇ ಅಲ್ಲಿನ ಭತ್ತದರಾಶಿ ಗುಡ್ಡ ಎಂಬಲ್ಲಿನ ಕಾಡಿಗೆ ಬೆಂಕಿ ಹಚ್ಚಿದ್ದರು ಎಂದು ಆರೋಪಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆದರಿಸಿ ದಾಳಿ ನಡೆಸಿದಿ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.

ಕಿಡಿಗೇಡಿಗಳ ಕೃತ್ಯದಿಂದಾಗಿ ಸುಮಾರು ಒಂದು ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗೆ ಸುಟ್ಟು ಹೋಗಿದ್ದು, ಇಲಾಖೆ ಸಿಬ್ಬಂದಿ ಬೆಂಕಿಯನ್ನು ನಂದಿಸಿ ಸಂಭವಿಸಲಿದ್ದ ಭಾರೀ ಅರಣ್ಯ ನಾಶವನ್ನು ತಪ್ಪಿಸಿದ್ದಾರೆಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News