ಚಿಕ್ಕಮಗಳೂರು: ಬೆಳೆ ನಾಶ, ಕೈ ತುಂಬಾ ಸಾಲ; ಮನನೊಂದು ಆತ್ಮಹತ್ಯೆಗೈದ ರೈತ

Update: 2023-09-01 10:09 GMT

ಚಿಕ್ಕಮಗಳೂರು: ಮಳೆ ಇಲ್ಲದೆ ಬೆಳೆ ನಾಶವಾದ ಹಿನ್ನೆಲೆಯಲ್ಲಿ ಮನನೊಂದ ರೈತನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರು ಗ್ರಾಮದಲ್ಲಿ ನಡೆದಿದೆ.

ಮೃತ ರೈತನನ್ನು ಪರಮೇಶ್ವರಪ್ಪ (52) ಎಂದು ಗುರುತಿಸಲಾಗಿದೆ. 3 ಎಕರೆ ಜಮೀನನಲ್ಲಿ ಹಾಕಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದಲ್ಲದೇ, ಬ್ಯಾಂಕ್ ಬಡ್ಡಿ ಹಾಗೂ ಕೈಸಾಲ ಸೇರಿ 5 ಲಕ್ಷ ಸಾಲ ಮಾಡಿದ್ದ ರೈತ ಪರಮೇಶ್ವರಪ್ಪ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾಫಿನಾಡಿನಲ್ಲುಂಟಾದ ಬರಗಾಲದಿಂದಾಗಿ ಎರಡು ದಿನದಲ್ಲಿ ಇಬ್ಬರು ರೈತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News