ಚಿಕ್ಕಮಗಳೂರು | ಕರ್ನಾಟಕ ಮುಸ್ಲಿಮ್ ಜಮಾಅತ್‌ನ ನೂತನ ಸಮಿತಿ ಅಸ್ತಿತ್ವಕ್ಕೆ
Update: 2024-12-18 16:38 GMT
ಚಿಕ್ಕಮಗಳೂರು : ಕರ್ನಾಟಕ ಮುಸ್ಲಿಮ್ ಜಮಾಅತ್(ಕೆಎಂಜೆ)ನ ಚಿಕ್ಕಮಗಳೂರು ಜಿಲ್ಲಾ ನೂತನ ಸಮಿತಿಯನ್ನು ಡಿ.17ರಂದು ರಚಿಸಲಾಯಿತು.
ಸಮಿತಿಯ ಅಧ್ಯಕ್ಷರಾಗಿ ಝಮೀರ್ ಮೂಸಬ್ಬ, ಪ್ರಧಾನ ಕಾರ್ಯದರ್ಶಿಯಾಗಿ ಕೆ.ಪಿ. ಅಬೂಬಕರ್ ಹಾಗೂ ಕೋಶಾಧಿಕಾರಿಯಾಗಿ ಮುಹಮ್ಮದ್ ರಫೀಕ್ ತರೀಕೆರೆ ಅವರನ್ನು ಆಯ್ಕೆ ಮಾಡಲಾಯಿತು.
ಸೈಯದ್ ಎ.ಪಿ.ಎಸ್.ತಂಙಳ್ ಮತ್ತು ಸೈಯದ್ ಹಾಮೀಮ್ ತಂಙಳ್ ಅವರ ನೇತೃತ್ವದಲ್ಲಿ ಕರ್ನಾಟಕ ಮುಸ್ಲಿಮ್ ಜಮಾಅತ್‌ನ ರಾಜ್ಯ ನಾಯಕರಾದ ಅಬೂ ಸೂಫಿಯಾನ್ ಉಸ್ತಾದ್, ಅಬ್ದುಲ್ ರಶೀದ್ ಝೈನಿ ಉಸ್ತಾದ್, ಉಮರಾ ನಾಯಕರಾದ ಸಾದಿಕ್ ಮಲೆಬೆಟ್ಟು, ಯೂಸುಫ್ ಹಾಜಿ ಇವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.