ಕೇಸ್ ಆದ ಮೇಲೆ ಆಣೆ ಪ್ರಮಾಣ ಅಪ್ರಸ್ತುತ : ಸಿ.ಟಿ.ರವಿ

Update: 2024-12-24 18:17 GMT

 ಸಿ.ಟಿ.ರವಿ

ಚಿಕ್ಕಮಗಳೂರು : ಪ್ರಕರಣ ತನಿಖೆ ಹಂತದಲ್ಲಿದೆ. ಪೊಲೀಸ್ ಕೇಸ್ ಆದ ಮೇಲೆ ಎಲ್ಲವೂ ಅಪ್ರಸ್ತುತ. ಕೇಸ್ ಆಗುವ ಮೊದಲೇ ಆಣೆ ಪ್ರಮಾಣದ ಬಗ್ಗೆ ಮಾತನಾಡಬಹುದಿತ್ತು ಎಂದು ಧರ್ಮಸ್ಥಳದಲ್ಲಿ ಆಣೆ ಪ್ರಮಾಣಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಹ್ವಾನಕ್ಕೆ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಆಣೆ ಪ್ರಮಾಣವೆಲ್ಲವೂ ಮುಗಿದ ಕಥೆ. ಅವರು ನನ್ನನ್ನು ಕೊಲೆಗಡುಕ ಎಂದು ಕರೆದಿದ್ದಾರೆ. ನಾನು ಯಾರನ್ನು ಕೊಲೆ ಮಾಡಿದ್ದೀನಿ ಎಂದ ಅವರು, ನಿನ್ನ ಮೇಲೆ ಕೆಸರು ಬಿದ್ದರೂ, ಕೆಸರಿನ ಮೇಲೆ ನೀನು ಬಿದ್ದರೂ ನೀನೇ ಸ್ನಾನ ಮಾಡಬೇಕು, ಕೆಸರಿನಿಂದ ದೂರ ಇದ್ದು ಬಿಡು ಎಂದು ನನಗೆ ದೊಡ್ಡವರು ಹೇಳಿದ್ದರು. ದೊಡ್ಡವರು ಹೇಳಿದಂತೆ ನಾನು ಇದರಿಂದ ದೂರ ಇರುತ್ತೇನೆ. ಎಲ್ಲವೂ ತನಿಖೆಯಿಂದ ಹೊರ ಬರಲಿ ಎಂದರು.

ಪ್ರಕರಣದ ಬಗ್ಗೆ ಸರಕಾರ ಸಿಐಡಿ ತನಿಖೆ ಮಾಡುವುದಾದರೇ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಮತ್ತು ಅವರ ನಿರ್ದೇಶನದಲ್ಲಿ ತನಿಖೆ ನಡೆಯಲಿ, ನಿಷ್ಪಕ್ಷಪಾತ ತನಿಖೆ ಪೊಲೀಸ್ ಪೇದೆ ಕೂಡ ಮಾಡುತ್ತಾನೆ. ಒತ್ತಡ ಇದ್ದರೇ ಏನು ಮಾಡುತ್ತಾರೆ. ಒತ್ತಡ ಇಲ್ಲದಿದ್ದರೇ ಹಿರೇಬಾಗೇವಾಡಿ ಪೊಲೀಸರೇ ಒಳ್ಳೆಯ ತನಿಖೆ ಮಾಡಬಹುದು. ಒತ್ತಡ ಇರುವ ಕಾರಣ ಹಾಲಿ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಸಿಐಡಿ ತನಿಖೆ ಮಾಡಿ ಎಂದು ರಾಜ್ಯ ಸರಕಾರವನ್ನು ಅವರು ಆಗ್ರಹಿಸಿದರು.


Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News