ಲೋಕಸಭೆ ಚುನಾವಣೆ | ಚಿಕ್ಕಮಗಳೂರಿನಲ್ಲಿ 17.39ಲಕ್ಷ ನಗದು ಸೇರಿ 4.89 ಕೋಟಿ ರೂ. ಮೌಲ್ಯದ ವಸ್ತುಗಳು ಜಪ್ತಿ

Update: 2024-04-07 17:10 GMT

ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ಹದ್ದಿನ ಕಣ್ಣಿಟ್ಟಿರುವ ಚುನಾವಣಾಧಿಕಾರಿಗಳ ತಂಡ ಚಿಕ್ಕಮಗಳೂರಿನಲ್ಲಿ ಇದುವರೆಗೆ 17.39 ಲಕ್ಷ ರೂ. ನಗದು ಸೇರಿದಂತೆ ಒಟ್ಟು 4,89,56879 ಕೋಟಿ ರೂ.ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳು ಹಾಗೂ ಮದ್ಯವನ್ನು ಪಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚುನಾವಣೆ ಘೋಷಣೆಯಾದಾಗುನಿಂದ ಇಲ್ಲಿಯವರೆಗೆ ಚಿಕ್ಕಮಗಳೂರಿನಲ್ಲಿ 4 ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಒಟ್ಟು 17,39,959 ರೂ. ನಗದು ವಶಕ್ಕೆ ಪಡೆದಿದ್ದರೇ, 4.37ಕೋಟಿ ರೂ. ಮೌಲ್ಯದ 7 ಕೆಜಿ 98ಗ್ರಾಂ ಚಿನ್ನದ ಆಭರಣಗಳು, 2.47ಲಕ್ಷ ರೂ.ಮೌಲ್ಯದ 1 ಕೆಜಿ 87 ಗ್ರಾಂ. ಬೆಳ್ಳಿ ಆಭರಣಗಳು, 27.16 ಲಕ್ಷ ರೂ. ಮೌಲ್ಯದ 8907 ಲೀಟರ್ ಮದ್ಯ, 63ಸಾವಿರ ರೂ. ಮೌಲ್ಯದ 2 ಕೆಜಿ ಮಾದಕ ವಸ್ತುಗಳು ಹಾಗೂ ಸುಮಾರು 4.75ಲಕ್ಷ ರೂ. ಮೌಲ್ಯದ ಸೀರೆ ಮತ್ತಿತರ ವಸ್ತುಗಳನ್ನು ಚುನಾವಣಾಧಿಕಾರಿಗಳ ತಂಡ ಇದುವರೆಗೆ ಜಪ್ತಿ ಮಾಡಿ ಪ್ರಕರಣ ದಾಖಲಿಸಿದೆ.

ವಿಧಾನಸಭಾ ಕ್ಷೇತ್ರದಲ್ಲಿ 2.29ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದರೇ, ಮೂಡಿಗೆರೆ ವಿಧಾನಸಭೆ ಕ್ಷೇತ್ರದಲ್ಲಿ 10.71 ಲಕ್ಷ, ತರೀಕೆರೆ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ 4.39ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ. ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರ ವಾಪ್ತಿಯಲ್ಲಿ ಇದುವರೆಗೂ ವಶಕ್ಕೆ ಪಡೆದಿಲ್ಲ. ಶೃಂಗೇರಿ ಕ್ಷೇತ್ರ ವ್ಯಾಪ್ತಿಯಲ್ಲಿ 151 ಲೀ. ಮದ್ಯ ವಶಕ್ಕೆ ಪಡೆದಿದ್ದರೇ, ಮೂಡಿಗೆರೆ ವ್ಯಾಪ್ತಿಯಲ್ಲಿ 189 ಲೀ., ಚಿಕ್ಕಮಗಳೂರು ಕ್ಷೇತ್ರದಲ್ಲಿ 8480 ಲೀ., ತರೀಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ 86 ಲೀಟರ್ ಮದ್ಯವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಉಡುಪಿ ಜಿಲ್ಲೆಯಲ್ಲೂ ಚುನಾವಣಾಧಿಕಾರಿಗಳ ತಂಡ ಮಾದರಿ ನೀತಿ ಸಂಹಿತೆ ಉಲ್ಲಂಘನೆಯನ್ನು ತಡೆಯಲು ಕಟ್ಟುನಿಟ್ಟಿನ ತಪಾಸಣಾ ಕ್ರಮಗಳನ್ನು ಕೈಗೊಂಡಿದ್ದು, ಇದುವರೆಗೆ ಉಡುಪಿ ಜಿಲ್ಲೆಯ 4 ವಿಧಾನಸಭೆ ಕ್ಷೇತ್ರಗಳಾದ ಕಾಪು, ಕಾರ್ಕಳ, ಕುಂದಾಪುರ, ಉಡುಪಿ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಇದುವರೆಗೆ ಚುನಾವಣಾಧಿಕಾರಿಗಳ ತಂಡ ಒಟ್ಟು, 14.92 ಲಕ್ಷ ರೂ. ನಗದನ್ನು ಚುನಾವಣಾಧಿಕಾರಿಗಳು ಜಪ್ತಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News