ವಿಪಕ್ಷದವರು ಹೇಳಿದ ತಕ್ಷಣ ಸರಕಾರ ಬೀಳುವುದಿಲ್ಲ : ಸಚಿವ ಸತೀಶ್ ಜಾರಕಿಹೊಳಿ

Update: 2024-10-09 08:49 GMT

ಚಿಕ್ಕಮಗಳೂರು : "ರಾಜ್ಯದಲ್ಲಿ ಸರಕಾರ ರಚನೆಯಾಗಿ ಆರು ತಿಂಗಳಿಂದ ಮುಖ್ಯಮಂತ್ರಿ ಬದಲಾವಣೆ ಆಗುತ್ತದೆ. ಸರಕಾರ ಬೀಳುತ್ತದೆ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದಾರೆ. ವಿಪಕ್ಷದವರು ಹೇಳಿದ ತಕ್ಷಣ ಸರಕಾರ ಬೀಳುವುದಿಲ್ಲ. ಐದು ವರ್ಷ ಈ ಸರಕಾರ ಗಟ್ಟಿಯಾಗಿರಲಿದೆ" ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಸರಕಾರ ರಚನೆಯಾದ ಮೊದಲ ದಿನದಿಂದಲೂ ವಿಪಕ್ಷ ನಾಯಕರು ಮುಖ್ಯಮಂತ್ರಿ ಬದಲಾವಣೆ ಆಗುತ್ತೆ ಎಂದು ಹೇಳುತ್ತಿದ್ದರು. ಈಗ 18 ತಿಂಗಳು ಕಳೆದಿದೆ. ವಿರೋಧ ಪಕ್ಷದವರು ಹೇಳುತ್ತಾರೆಂದು ಸರಕಾರ ಬೀಳಲ್ಲʼ ಎಂದರು.

ಹಿರಿಯ ನಾಯಕ ಕೋಳಿವಾಡ ಅವರ ʼಮುಡಾʼ ಹೇಳಿಕೆಗೆ ಪ್ರತಿಕ್ರಿಯಿಸಿ, ʼಮುಡಾ ಹಗರಣಕ್ಕೂ ಹರ್ಯಾಣ ಚುನಾವಣೆಗೂ ಏನು ಸಂಬಂಧ, ಮುಡಾ ನಮ್ಮ ರಾಜ್ಯಕ್ಕೆ ಸೀಮಿತವಾಗಿರುವ ವಿಚಾರ. ಅದರ ಪಾಡಿಗೆ ಅದರ ತನಿಖೆ ನಡೆಯುತ್ತಿದೆʼ ಎಂದರು.

ಜಾತಿ ಗಣತಿ ವರದಿ ಪರ-ವಿರೋಧ ಚರ್ಚೆ ಬಗ್ಗೆ ಮಾತನಾಡಿದ ಅವರು, ವರದಿ ಕುರಿತು ಸಚಿವ ಸಂಪುಟದಲ್ಲಿ ಚರ್ಚೆಯಾಗಬೇಕು. ಸದನಕ್ಕೆ ಬರಬೇಕು. ಅದರಲ್ಲಿ ಏನಿದೆ ಎಂದು ನೋಡೋಣ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News