ಚಿಕ್ಕಮಗಳೂರು : ಪಿತೃ ಪಕ್ಷದ ಊಟಕ್ಕೆ ಹೋಗಲು ಪೊಲೀಸ್ ಜೀಪ್ ಕರೆಸಿಕೊಂಡ ವ್ಯಕ್ತಿ!

Update: 2024-09-27 06:50 GMT

ಚಿಕ್ಕಮಗಳೂರು : ಪಿತೃ ಪಕ್ಷದ ಊಟಕ್ಕೆ ಹೋಗಲು ವ್ಯಕ್ತಿಯೊಬ್ಬ ಪೊಲೀಸ್ ಜೀಪ್ ಕರೆಸಿಕೊಂಡ  ಘಟನೆ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ತರುವೆ ಗ್ರಾಮದಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ತರುವೆ ಗ್ರಾಮದ ಅಶೋಕ್ ಎಂಬಾತ ಪೊಲೀಸರಿಗೆ  ಕರೆ ಮಾಡಿದ ವ್ಯಕ್ತಿ. 112 ನಂಬರ್ ಗೆ ಕರೆ ಮಾಡಿದ ಈತ "ಸರ್… ಗಲಾಟೆ ನಡೆಯುತ್ತಿದೆ" ಬೇಗ ಬನ್ನಿ ಎಂದು ಮನವಿ ಮಾಡಿದ್ದಾನೆ. ಆದರೆ  ಸ್ಥಳಕ್ಕೆ ಬಂದ ಪೊಲೀಸರೊಂದಿಗೆ "ಯಾವುದೇ ಗಾಡಿ ಇಲ್ಲ, ಮಳೆ ಬೇರೆ ಬರುತ್ತಿದೆ, ಹಾಗಾಗಿ ಪಲ್ಗುಣಿ ಗ್ರಾಮದಲ್ಲಿರುವ  ತನ್ನ ಮಾವನ ಮನೆಗೆ ಡ್ರಾಪ್ ಮಾಡುವಂತೆ ಕೋರಿದ್ದಾನೆ. ಈತನ ಪೋಕರಿ ನೋಡಿ ಪೊಲೀಸರಿಗೆ ಒಂದು ಕ್ಷಣ ಬೈಯ್ಯಬೇಕೋ, ನಗಬೇಕೋ ತಿಳಿಯಲಿಲ್ಲ ಎನ್ನಲಾಗುತ್ತಿದೆ.

ಪಿತೃ ಪಕ್ಷದ ಊಟಕ್ಕೆ ಹೊರಟಿದ್ದ ಅಶೋಕ್ ಗೆ ಬುದ್ದಿವಾದ ಹೇಳಿದ ಪೊಲೀಸರು ಕೊನೆಗೆ ಲಾರಿಯೊಂದನ್ನು ನಿಲ್ಲಿಸಿ ಮಾವನ ಮನೆಗೆ ಕಳಿಸಿದ್ದಾರೆ.

ಇದೀಗ "ಯಾವ್ಯಾವುದೋ ಕೆಲಸಕ್ಕೆ ಬಳಕೆಯಾಗುವ ಪೊಲೀಸ್ ಜೀಪ್ ಒಳ್ಳೆ ಕೆಲಸಕ್ಕೆ ಉಪಯೋಗವಾಗಿದೆ" ಎಂದು ಜನ ಆಡಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ. 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News