ಅಂಬಳೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ : ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

Update: 2024-01-30 17:40 GMT

ಚಿಕ್ಕಮಗಳೂರು: ತಾಲೂಕಿನ ಅಂಬಳೆ ಹೋಬಳಿಯ ಕೆ.ಆರ್.ಪೇಟೆ ಗ್ರಾಮದ ಸಮೀಪದ ನೆಡುತೋಪು ಪ್ರದೇಶದಲ್ಲಿ ಬಿಟ್ಟಮ್ಮ ಆನೆ ತಂಡವು ಬೀಡು ಬಿಟ್ಟಿದ್ದು, ಸುಮಾರು 20ರಿಂದ 25 ಕಾಡಾನೆಗಳು ಈ ತಂಡದಲ್ಲಿವೆ.

ಸಾರ್ವಜನಿಕ ಸುರಕ್ಷತಾ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಕೈಗೊಳ್ಳುವ ಹಿನ್ನೆಲೆಯಲ್ಲಿ ಕೆ.ಆರ್.ಪೇಟೆ, ಮತ್ತಿಕೆರೆ, ಮಾವಿನಕೆರೆ, ನೆರಡಿ, ಬಿಗ್ಗದೇವನಹಳ್ಳಿ, ಬೀಗ್ಗನಹಳ್ಳಿ, ಹಲುವಳ್ಳಿ, ಕಂಬಿಹಳ್ಳಿ, ತಗದೂರು. ಕುಂದೂರು, ಕೆಸವಿನ ಮನೆ, ಮಳ್ಳೂರು, ಕೆಂಚನಹಳ್ಳಿ, ಹಾದಿಹಳ್ಳಿ, ಗ್ರಾಮಗಳ ವ್ಯಾಪ್ತಿಯಲ್ಲಿ ಈ ಕಾಡಾನೆಯನ್ನು ವಾಪಾಸ್ಸು ಅರಣ್ಯಕ್ಕೆ ಹಿಂಮ್ಮೆಟ್ಟಿಸಲು ಕಾರ್ಯಾಚರಣೆ ನಡೆಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಾಂತಿ, ಸುವ್ಯವಸ್ಥೆ ಹಾಗೂ ಸಂರಕ್ಷಣಾ ದೃಷ್ಟಿಯಿಂದ ಕೆ.ಆರ್.ಪೇಟೆ, ಮತ್ತಿಕೆರೆ, ಮಾವಿನಕೆರೆ, ನೆರಡಿ, ಬಿಗ್ಗದೇವನಹಳ್ಳಿ, ಬೀಗ್ಗನಹಳ್ಳಿ, ಹಲುವಳ್ಳಿ, ಕಂಬಿಹಳ್ಳಿ, ತಗದೂರು. ಕುಂದೂರು, ಕೆಸವಿನ ಮನೆ, ಮಳ್ಳೂರು, ಕೆಂಚನಹಳ್ಳಿ, ಹಾದಿಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ನಿಷೇದಾಜ್ಞೆಯನ್ನು ಜ.30ರ ಬೆಳಿಗ್ಗೆಯಿಂದ ಜ.31ರ ಬೆಳಗ್ಗೆ 10ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಚಿಕ್ಕಮಗಳೂರು ಉಪವಿಭಾಗದ ಉಪವಿಭಾಗೀಯ ದಂಡಾಧಿಕಾರಿ ಹಾಗೂ ಉಪವಿಭಾಗಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ನಿಷೇಧಾಜ್ಞೆ ಹೋರಡಿಸಿರುವ ಅವಧಿಯಲ್ಲಿ ಗುಂಪಾಗಿ ಸೇರಲು ಅವಕಾಶವಿರುವುದಿಲ್ಲ.

ಈ ಗ್ರಾಮಗಳ ವ್ಯಾಪ್ತಿಯಲ್ಲಿರುವ ಶಾಲಾ, ಕಾಲೇಜುಗಳಿಗೆ ರಜೆ ನೀಡಿರುವುದರಿಂದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಓಡಾಡುವುದನ್ನು ನಿಷೇಧಿಸಿದೆ. ಸಾರ್ವಜನಿಕರು ಯಾವುದೇ ಶಾಸ್ತ್ರಸ್ತ್ರ, ಮಾರಕಾಸ್ತ್ರ ಹಿಡಿದು ಓಡಾಡಲು ಮತ್ತು ಬಳಸಲು ಅವಕಾಶವಿರುವುದಿಲ್ಲ. ಯಾವುದೇ ಸಿಡಿಮದ್ದು, ಇತ್ಯಾದಿ ಸ್ಪೋಟಕಗಳನ್ನು ಬಳಸುವಂತಿಲ್ಲ. ಎಲ್ಲ ರೀತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News