ಮೂಡಿಗೆರೆ : ಶಾಲೆ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ಪದಾರ್ಥ ಪತ್ತೆ: ತನಿಖೆಗೆ ಆಗ್ರಹ

Update: 2024-02-13 17:27 GMT

ಮೂಡಿಗೆರೆ: ಕ್ಷೇತ್ರ ಶಿಕ್ಷಣಾಧಿಕಾರಿ ಹೇಮಂತ ಚಂದ್ರ ಅವರು ಮಂಗಳವಾರ ವಿವಿಧ ಶಾಲೆಗಳಿಗೆ ಭೇಟಿ ನಡೆಸಿದ ಸಂದರ್ಭದಲ್ಲಿ ತಾಲೂಕಿನ ಕಿರುಗುಂದ ಎಚ್‍ಪಿಎಸ್ ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ದಾಸ್ತಾನು ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ಬಗ್ಗೆ ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಕೆ.ಆರ್.ಲೋಕೇಶ್ ಮಾತನಾಡಿ, ಕಿರುಗುಂದ ಶಾಲೆಯಲ್ಲಿ ಮಕ್ಕಳಿಗಾಗಿ ಸರಕಾರ ನೀಡುತ್ತಿದ್ದ ಆಹಾರ ಸಾಮಾಗ್ರಿಗಳನ್ನು ಶಿಕ್ಷಕಿಯೋರ್ವರು ಮನೆಗೆ ಕೊಂಡೊಯ್ಯುತ್ತಿದ್ದ ಬಗ್ಗೆ ಈ ಹಿಂದೆಯೇ ಮಾಹಿತಿ ಇತ್ತು. ಈ ಬಗ್ಗೆ ಬಿಇಒ ಅವರ ಗಮನಕ್ಕೆ ಕೂಡ ತರಲಾಗಿತ್ತು. ಆದರೆ ಅವರು ಗಮನ ಹರಿಸಿರಲಿಲ್ಲ. ಮಂಗಳವಾರ ಬಿಒಒ ಶಾಲೆಗೆ ಭೇಟಿ ನೀಡುತ್ತಿದ್ದಾರೆಂಬ ಮಾಹಿತಿ ಮೇರೆಗೆ ಕಿರುಗುಂದ ಗ್ರಾ.ಪಂ. ಅಧ್ಯಕ್ಷೆ ಸ್ವಾತಿಶ್ರೀ ಹಾಗೂ ಸ್ಥಳೀಯರಾದ ರಾಮಯ್ಯ, ಮಂಜುನಾಥ್, ಚನ್ನಕೇಶವ ಇವರೆಲ್ಲಾ ಶಾಲೆಗೆ ತೆರಳಿ, ಅಲ್ಲಿ ಕಂಪ್ಯೂಟರ್ ಕೊಠಡಿ ಬೀಗ ತೆಗೆಸಿದಾಗ ಹಾಲಿನಪುಡಿ, ಅಕ್ಕಿ, ಬೇಳೆ, ಎಣ್ಣೆ, ಗೋಧಿ ಹಾಗೂ ಶಾಲೆ ಮಕ್ಕಳ ಶೋ ಗಳು ಪತ್ತೆಯಾಗಿದೆ ಎಂದು ಹೇಳಿದರು.

ಶಾಲೆಗೆ ಬರುವ ಆಹಾರ ಪದಾರ್ಥಗಳನ್ನು ಇಲ್ಲಿನ ಶಿಕ್ಷಕಿಯೇ ಕೊಂಡೊಯ್ಯುತ್ತಿದ್ದರು. ಹೆಚ್ಚುವರಿ ಪದಾರ್ಥವನ್ನು ತರಕಾರಿ ಆಟೊದಲ್ಲಿ ಸಾಗಿಸುತ್ತಿದ್ದಾರೆಂಬ ಮಾಹಿತಿ ಕೂಡ ಬಂದಿತ್ತು. ಹಾಗಾಗಿ ಆಹಾರ ಪದಾರ್ಥಗಳನ್ನು ಕಂಪ್ಯೂಟರ್ ಕೊಠಡಿಯಿಂದ ಸಾಗಿಸಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ದಾಸ್ತಾನು ಕೊಠಡಿಯಲ್ಲಿದ್ದ ಆಹಾರ ಪದಾರ್ಥ ಕಂಪ್ಯೂಟರ್ ಕೊಠಡಿಗೆ ವರ್ಗಾಯಿಸಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಸಿದ್ದಾರೆ.

ಕಿರುಗುಂದ ಶಾಲೆಯ ಕಂಪ್ಯೂಟರ್ ಕೊಠಡಿಯಲ್ಲಿ ಆಹಾರ ಪದಾರ್ಥ ಶೇಖರಿಸಿಟ್ಟಿರುವುದು ಮಂಗಳವಾರ ಕಂಡು ಬಂದಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಪ್ಪು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಬಿಇಒ ಹೇಮಂತಚಂದ್ರ  ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News