ತರೀಕೆರೆ : ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ಶ್ರೀಗಂಧದ ಮರಗಳು ಬೆಂಕಿಗಾಹುತಿ

Update: 2024-02-23 09:56 GMT

ಚಿಕ್ಕಮಗಳೂರು: ಆಕಸ್ಮಿಕವಾಗಿ ಬೆಂಕಿ ತಗುಲಿ ನೂರಾರು ಶ್ರೀಗಂಧದ ಮರಗಳು ಸುಟ್ಟು ಕರಕಲಾಗಿರುವ ಘಟನೆ ತರೀಕೆರೆ ತಾಲೂಕಿನ ಶಿವಪುರ ಸಮೀಪ ನಡೆದಿದೆ.

ಶ್ರೀಗಂಧ ಬೆಳೆಗಾರ ವಿಶುಕುಮಾ‌ರ್ ಎಂಬವರ ತೋಟದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದ್ದು, ಇದೇ ವೇಳೆ ಹನಿ ನೀರಾವರಿಗೆ ಅಳವಡಿಸಿದ್ದ ಪ್ಲಾಸ್ಟಿಕ್ ಪೈಪ್ ಗಳು ಸಹಾ ಬೆಂಕಿಗಾಹುತಿಯಾಗಿವೆ ಎಂದು ಹೇಳಲಾಗಿದೆ.

ಬದುಗಳಿಗೆ ಬೆಂಕಿ ಹಚ್ಚಿದಾಗ ಅದು ಆಕಸ್ಮಿಕವಾಗಿ ತೋಟಕ್ಕೆ ಆವರಿಸಿರುವ ಶಂಕೆ ವ್ಯಕ್ತವಾ ಗಿದ್ದು, ನೂರಾರು ಮರಗಳು ಸುಟ್ಟು ಕರಕಲಾಗಿ, ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಬೆಳೆಗಾರ ವಿಶುಕುಮಾ‌ರ್ ತಿಳಿಸಿದ್ದಾರೆ. ಘಟನೆ ಸಂಬಂಧ ಅರಣ್ಯ ಇಲಾಖೆಗೆ ದೂರು ಸಹ ನೀಡಲಾಗಿದೆ. ಬೇಸಿಗೆ ಸಮೀಪಿಸುತ್ತಿರುವ ಹೊತ್ತಲ್ಲೇ ಜಿಲ್ಲೆಯಲ್ಲಿ ಅಗ್ನಿ ಅನಾಹುತಗಳು ದಿನೆ ದಿನೇ ಹೆಚ್ಚುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News