ಮಲಯಾಳಂ ನಟ ದಿಲೀಪ್ ಶಂಕರ್ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ
Update: 2024-12-29 11:07 GMT
ತಿರುವನಂತಪುರಂ: ಮಲಯಾಳಂ ಕಿರುತೆರೆ ನಟ ದಿಲೀಪ್ ಶಂಕರ್ ಅವರು ತಿರುವನಂತಪುರಂನ ಹೋಟೆಲ್ ಕೊಠಡಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
'ಪಂಚಾಗ್ನಿ' ಧಾರಾವಾಹಿಯ ಚಿತ್ರೀಕರಣಕ್ಕಾಗಿ ನಟ ದಿಲೀಪ್ ಶಂಕರ್ ತಿರುವನಂತಪುರಂಗೆ ತೆರಳಿದ್ದರು. ಎರಡು ದಿನಗಳ ಮೊದಲು ಅವರು ಕೊನೆಯ ಬಾರಿಗೆ ಚಿತ್ರೀಕರಣಕ್ಕೆ ಹಾಜರಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.
ನಟ ದಿಲೀಪ್ ಶಂಕರ್ ಹೊಟೇಲ್ ಕೊಠಡಿಯಿಂದ ಎರಡು ದಿನಗಳಿಂದ ಹೊರಗಡೆ ಬಂದಿಲ್ಲ. ಕೊಠಡಿಯಿಂದ ದುರ್ವಾಸನೆ ಬಂದ ಹಿನ್ನೆಲೆ ಪರಿಶೀಲನೆ ನಡೆಸಿದಾಗ ಮೃತದೇಹ ಪತ್ತೆಯಾಗಿದೆ ಎಂದು ಹೊಟೇಲ್ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ.
ಅಮ್ಮಯರಿಯಾದೆ ಮತ್ತು ಪಂಚಾಗ್ನಿಯಂತಹ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿನ ಪಾತ್ರಗಳಿಗೆ ದಿಲೀಪ್ ಹೆಸರುಗಳಿಸಿದ್ದರು. ದಿಲೀಪ್ ಶಂಕರ್ ಅವರ ಹಠಾತ್ ನಿಧನ ಮಲಯಾಳಂ ಚಿತ್ರರಂಗಕ್ಕೆ ಆಘಾತವನ್ನುಂಟುಮಾಡಿದೆ.