ಖ್ಯಾತ ನಿರ್ದೇಶಕ ಸಿದ್ದಿಕ್ ನಿಧನ

Update: 2023-08-08 17:36 GMT

ಸಿದ್ದಿಕ್ (Photo: Twitter/@ManobalaV)

 

ಕೊಚ್ಚಿ: ಮಲಯಾಳಂ ಚಿತ್ರ ರಂಗದ ಖ್ಯಾತ ನಿರ್ದೇಶಕ ಹಾಗೂ ಚಿತ್ರಕಥೆಗಾರ ಸಿದ್ದಿಕ್ (67) ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ ಎಂದು mathrubhumi.com ವರದಿ ಮಾಡಿದೆ.

ಈಗಾಗಲೇ ನ್ಯುಮೋನಿಯಾ ಮತ್ತು ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಹೃದಯಾಘಾತವಾಗಿದ್ದು, ಸೋಮವಾರ ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು.

ಅವರು ತಮ್ಮ ಶಿಕ್ಷಣವನ್ನು ಕಲೂರ್ ನ ಸರಕಾರಿ ಪ್ರೌಡಶಾಲೆ, ಕಲಮಸ್ಸೇರಿಯ ಸಂತ ಪೌಲರ ಕಾಲೇಜು ಹಾಗೂ ಎರ್ನಾಕುಳಂನ ಮಹಾರಾಜ ಕಾಲೇಜಿನಲ್ಲಿ ಪೂರೈಸಿದರು. ಅವರು ಹಿರಿಯ ಚಿತ್ರ ನಿರ್ದೇಶಕ ಫಜಿಲ್ ಅವರ ಸಹಾಯಕ ನಿರ್ದೇಶಕರಾಗಿ 1983ರಲ್ಲಿ ಮಲಯಾಳಂ ಚಿತ್ರರಂಗ ಪ್ರವೇಶಿಸಿದರು. ಅನಂತರ ಸಿದ್ದೀಕ್ ಅವರು ‘ರಾಮ್ ಜಿ ರಾವ್ ಸ್ಪೀಕಿಂಗ್’ (1989) ಚಿತ್ರದ ಮೂಲಕ ನಿರ್ದೇಶಕರಾಗಿ ಹೊರ ಹೊಮ್ಮಿದರು. 

‘ಇನ್​ ಹರಿಹರ್​ ನಗರ್​’, ‘ಗಾಡ್​ಫಾದರ್​’, ‘ರಾಮ್​ಜಿ ರಾವ್​ ಸ್ಪೀಕಿಂಗ್​’, ‘ವಿಯಾಟ್ನಂ ಕಾಲೋನಿ’, ‘ಕಾಬೂಲಿವಾಲಾ’, 'ಫ್ರೆಂಡ್ಸ್', 'ಹಿಟ್ಲರ್' ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಿದ್ಧಿಕಿ ನಿರ್ದೇಶನ ಮಾಡಿದ್ದಾರೆ. ಸಲ್ಮಾನ್ ಖಾನ್ ಅವರ ಬಾಡಿಗಾರ್ಡ್ ಚಿತ್ರಕ್ಕೂ ನಿರ್ದೇಶನ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News