ಬಾಲಿವುಡ್ ನಟ ಶಾರುಖ್ ಖಾನ್ ಗೂ ಬೆದರಿಕೆ ಕರೆ: ಪ್ರಕರಣ ದಾಖಲು

Update: 2024-11-07 16:02 IST
Photo of Shah Rukh Khan

ಬಾಲಿವುಡ್ ನಟ ಶಾರುಖ್ ಖಾನ್ | PC : PTI 

  • whatsapp icon

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ಮುಂಬೈ ಪೊಲೀಸರು ಗುರುವಾರ ಮಾಹಿತಿ ನೀಡಿದ್ದಾರೆ.

ನಟ ಸಲ್ಮಾನ್ ಖಾನ್ ಗೆ ಸರಣಿ ಬೆದರಿಕೆಗಳು ಬಂದ ಬೆನ್ನಲ್ಲೇ ಈಗ ಶಾರುಖ್ ಖಾನ್ ಗೂ ಬೆದರಿಕೆ ಕರೆ ಬಂದಿದೆ.

ಶಾರುಖ್ ಖಾನ್‌ ಗೆ ಬೆದರಿಕೆ ಕರೆ ಮಾಡಿದ ಅಪರಿಚಿತರ ವಿರುದ್ಧ ಬಾಂದ್ರಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಾರುಖ್ ಖಾನ್‌ ಗೆ ಛತ್ತೀಸ್ಗಢದಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News