ಶಾರುಖ್ ಖಾನ್ ನಟನೆಯ ‘ಡಂಕಿ’ ಟೀಸರ್ ಬಿಡುಗಡೆ

Update: 2023-11-02 17:57 GMT

Photo: youtube/@RedChilliesEntertainment

ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ 58ನೇ ಜನ್ಮದಿನವಾದ ಇಂದು ಅವರ ನಾಯಕತ್ವದ ಬಹುನಿರೀಕ್ಷಿತ ‘ಡಂಕಿ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಈ ಟೀಸರ್ ಗೆ ‘ಡಂಕಿ ಡ್ರಾಪ್ 1’ ಎಂಬ ಶೀರ್ಷಿಕೆ ನೀಡಲಾಗಿದೆ.

‘ಡಂಕಿ’ ಚಿತ್ರದಲ್ಲಿ ಶಾರುಖ್ ಖಾನ್ ‘ಹಾರ್ಡಿ’ ಪಾತ್ರ ನಿರ್ವಹಿಸಿದ್ದರೆ, ಮತ್ತೊಂದು ಪ್ರಮುಖ ಪಾತ್ರವಾದ ‘ಸುಖಿ’ಯಾಗಿ ವಿಕ್ಕಿ ಕೌಶಲ್ ಕಾಣಿಸಿಕೊಂಡಿದ್ದಾರೆ.

ನಾಯಕಿ ಪಾತ್ರವನ್ನು ತಾಪ್ಸಿ ಪನ್ನು ನಿರ್ವಹಿಸಿದ್ದು, ಬಲ್ಲಿ ಪಾತ್ರದಲ್ಲಿ ಅನಿಲ್ ಗ್ರೋವರ್ ಕಾಣಿಸಿಕೊಂಡಿದ್ದಾರೆ.

ರಾಜಕುಮಾರ್ ಹಿರಾನಿ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿದ್ದು, ಕ್ರಿಸ್ಮಸ್ ನಂದು ಬಿಡುಗಡೆಗೆ ಸಿದ್ಧವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News