ಯಶ್ ಜನ್ಮದಿನದಂದು ‘ಟಾಕ್ಸಿಕ್’ ಚಿತ್ರದ ಫಸ್ಟ್ ಲುಕ್ ರಿಲೀಸ್?
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್, ‘ಕೆಜಿಎಫ್-2’ ಚಿತ್ರದ ನಂತರ ದೊಡ್ಡ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ‘ಟಾಕ್ಸಿಕ್’ ಚಿತ್ರದ ಫಸ್ಟ್ ಲುಕ್ ಅವರ ಜನ್ಮದಿನವಾದ ಜನವರಿ 8ರಂದು ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಜನವರಿ 8 ಯಶ್ ರ ಜನ್ಮದಿನವಾಗಿದ್ದು, ಈ ಬಾರಿ ತಾನು ಜನ್ಮ ದಿನ ಆಚರಿಸಿಕೊಳ್ಳುವುದಿಲ್ಲ ಎಂದು ಅವರು ಈಗಾಗಲೇ ಪ್ರಕಟಿಸಿದ್ದಾರೆ. ಹೀಗಿದ್ದೂ, ತಮ್ಮ ಅಭಿಮಾನಿಗಳಿಗೆ ಯಶ್ ನಿರಾಸೆ ಮಾಡುತ್ತಿಲ್ಲ. ತಮ್ಮ ಜನ್ಮ ದಿನದಂದು ಅವರು ತಮ್ಮ ಅಭಿಮಾನಿಗಳಿಗೆ ‘ಟಾಕ್ಸಿಕ್’ ಚಿತ್ರದ ಕುರಿತು ಬಹು ದೊಡ್ಡ ಸುದ್ದಿ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಅಂದು ‘ಟಾಕ್ಸಿಕ್’ ಚಿತ್ರದ ತುಣುಕೊಂದನ್ನು ಬಿಡುಗಡೆ ಮಾಡುವ ಕುರಿತು ಚಿತ್ರ ತಂಡ ಯೋಜನೆ ರೂಪಿಸಿದೆ. ಈ ಸಂಗತಿಯನ್ನು ಚಿತ್ರದ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ಭಿತ್ತಿಚಿತ್ರವೊಂದನ್ನು ಬಿಡುಗಡೆಗೊಳಿಸುವ ಮೂಲಕ ಪ್ರಕಟಿಸಿದೆ.
ಈ ಭಿತ್ತಿ ಚಿತ್ರದಲ್ಲಿ ಕಾರೊಂದರ ಮುಂದೆ ಸಿಗರೇಟು ಸೇದುತ್ತಿರುವ ಯಶ್, ತಲೆಗೊಂದು ಟೋಪಿ ಹಾಕಿಕೊಂಡು ರೆಟ್ರೊ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಭಿತ್ತಿ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
Unleashing him… pic.twitter.com/yspMrqBBmo
— Yash (@TheNameIsYash) January 6, 2025