ಮಂಗಳೂರಿನ ಪತ್ರಿಕಾ ಭವನದ ನವೀಕೃತ ಕಟ್ಟಡ ಉದ್ಘಾಟನೆ

Update: 2023-11-08 15:49 GMT

ಮಂಗಳೂರು: ಮಂಗಳೂರು ಪತ್ರಿಕಾ ಭವನ ಕಟ್ಟಡದ ಮುಂದಿನ ಹಂತದ ಅಭಿವೃದ್ಧಿ ಕಾಮಗಾರಿಗೆ ಸಂಸದರ ನಿಧಿಯಿಂದ 10 ಲಕ್ಷ ರೂ. ಮಂಜೂರು ಗೊಳಿಸಿರುವುದಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಿನ ಉರ್ವ ಮಾರ್ಕೆಟ್ ರಸ್ತೆಯ ಗಾಂಧಿ ನಗರದಲ್ಲಿ ಮಂಗಳವಾರ ಪ್ರೆಸ್‌ಕ್ಲಬ್‌ನ ನವೀಕೃತ ಕೊಠಡಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅತ್ಯಾಧುನಿಕ ರೀತಿಯಲ್ಲಿ ಈ ಪತ್ರಿಕಾ ಭವನದ ನವೀಕರಣ ನೆರವೇರಿಸಲಾಗಿದೆ. ಮಂಗಳೂರಲ್ಲಿ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ಈ ಮೂರು ಸಂಘಟನೆಗಳು ಇದ್ದರೂ ಎಲ್ಲವೂ ಒಗ್ಗಟ್ಟಿನಿಂದ ಇದೆ. ಮಂಗಳೂರಿನ ಪತ್ರಕರ್ತರು ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸುತ್ತಿರುವುದು ಮಾದರಿ. ನನ್ನ ರಾಜಕೀಯ ಏಳಿಗೆಗೆ ಪಕ್ಷ, ಸಂಘಟನೆ ಹೊರತುಪಡಿಸಿದರೆ, ಮಂಗಳೂರಿನ ಪತ್ರಕರ್ತರೂ ಕಾರಣರಾಗಿದ್ದಾರೆ. ಇಡೀ ರಾಜ್ಯಕ್ಕೆ ಮಂಗಳೂರಿನ ಪತ್ರಕರ್ತರ ತಂಡ ಆದರ್ಶಪ್ರಾಯವಾಗಿದೆ. ಪತ್ರಕರ್ತರ ಅಭ್ಯುದಯಕ್ಕೆ ಸಹಕಾರ ನೀಡಲು ಬದ್ಧವಾಗಿರುವುದಾಗಿ ಅವರು ಹೇಳಿದರು.

ಕ್ಲಬ್ ಹೌಸ್ ನಿರ್ಮಾಣ ಬೇಡಿಕೆ: ಮಂಗಳೂರು ಪ್ರೆಸ್‌ಕ್ಲಬ್ ಸ್ಥಾಪಕ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಕೆ.ಆನಂದ ಶೆಟ್ಟಿ ಮಾತನಾಡಿ, 2002ರಲ್ಲಿ ಸ್ಥಾಪನೆಯಾದ ಪ್ರೆಸ್‌ಕ್ಲಬ್ ಕಳೆದ 21 ವರ್ಷಗಳಲ್ಲಿ ಸಾಗಿಬಂದ ಹಾದಿಯನ್ನು ಮೆಲುಕು ಹಾಕಿ ದರು. 2007ರಲ್ಲಿ ಲೇಡಿಹಿಲ್‌ನ ಈ ಕಟ್ಟಡಕ್ಕೆ ಪ್ರೆಸ್‌ಕ್ಲಬ್ ಸ್ಥಳಾಂತರಗೊಂಡು ಕಾರ್ಯನಿರ್ವಹಿಸಲಾರಂಭಿಸಿತು. ಬಳಿಕ ಎಲ್ಲ ತಾಲೂಕು ಕೇಂದ್ರಗಳಲ್ಲಿ ಪ್ರೆಸ್‌ಕ್ಲಬ್ ಆರಂಭವಾಯಿತು. ಮುಂದೆ ಕ್ಲಬ್ ಹೌಸ್ ನಿರ್ಮಿಸುವ ಇಂಗಿತವನ್ನು ವ್ಯಕ್ತಪಡಿಸಿದರು.

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ, ಮೂರು ಸಂಘಟನೆ ಗಳು ಒಂದಾಗಿ ರಾಜ್ಯಕ್ಕೆ ಮಾದರಿಯಾಗಿ ಇಲ್ಲಿ ಪತ್ರಕರ್ತರು ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಕರ್ತರ ಜಿಲ್ಲಾ ಸಮ್ಮೇಳನ ಮಂಗಳೂರಿನಲ್ಲಿ ನವೆಂಬರ್ 21ರಂದು ನಡೆಯಲಿದೆ. ಜನವರಿಯಲ್ಲಿರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯ ಜನವರಿ 5,6,7 ರಂದು ಜಿಲ್ಲಾ ಸಂಘದ ಆತಿಥ್ಯ ದಲ್ಲಿ ನಡೆಯಲಿದೆ ಎಂದರು.

ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಸ್ವಾಗತಿಸಿ ಮಾತನಾಡಿ, ಪ್ರೆಸ್‌ಕ್ಲಬ್ ಬೆಳೆದು ಬಂದ ಹಾದಿಯನ್ನು ವಿವರಿಸಿದರಲ್ಲದೆ, ಪ್ರೆಸ್‌ಕ್ಲಬ್ ವತಿಯಿಂದ ರಿಕ್ರಿಯೇಷನ್ ಕ್ಲಬ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಇದೇ ಸಂದರ್ಭ ನವೀಕರಣದ ಗುತ್ತಿಗೆದಾರ ಪುರಂದರ, ಪ್ರೆಸ್‌ಕ್ಲಬ್ ಮೆನೇಜರ್ ಅಭಿಷೇಕ್, ಸಿಬ್ಬಂದಿ ಚಂಚಲಾಕ್ಷಿ ಇವರನ್ನು ಗೌರವಿಸಲಾಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್ ,ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಪ್ರೆಸ್‌ಕ್ಲಬ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಇದ್ದರು.

ಹಿರಿಯ ಪತ್ರಕರ್ತ ರವೀಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಪ್ರೆಸ್‌ಕ್ಲಬ್ ಕಾರ್ಯಕಾರಿಣಿ ಸಮಿತಿ ಸದಸ್ಯ ಆತ್ಮ ಭೂಷಣ್ ವಂದಿಸಿದರು. ಪತ್ರಿಕಾ ಭವನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ವೇಣು ವಿನೋದ್ ಕಾರ್ಯಕ್ರಮ ನಿರೂಪಿ ಸಿದರು.ಸಂಧ್ಯಾ, ಸತ್ಯವತಿ ಹಾಗೂ ಅತಿಥಿ ಗಳು ಗೌರವ ಸಮರ್ಪಣೆ ನೆರವೇರಿಸಿ ದರು.ಪತ್ರಿಕಾ ಭವನದ ಟ್ರಸ್ಟಿ ಗಳಾದ ಹರ್ಷ,ಪುಷ್ಪ ರಾಜ್ ಬಿ.ಎನ್,ರಾಜ್ಯ ಕಾರ್ಯ ನಿರತ ಪತ್ರ ಕರ್ತರ ಸಂಘದ ಕಾರ್ಯ ಕಾರಿ ಸಮಿತಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ಹಿರಿಯ ಪತ್ರಕರ್ತ ರಾದ ಪ್ರಕಾಶ್ ಪಾಂಡೇಶ್ವರ, ಅನ್ನು ಮಂಗಳೂರು,ಭಾಸ್ಕರ್ ರೈ ಕಟ್ಟ,ಅಶೋಕ್ ಶೆಟ್ಟಿ ಬಿ.ಎನ್ ,ವಿಲ್ಫೇಡ್ ಡಿ ಸೋಜ ,ಸತೀಶ್ ಇರಾ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News