ಮಾ.23ರಂದು ಶಾಸಕ ಐವನ್ ಡಿಸೋಜಾ ನೇತೃತ್ವದಲ್ಲಿ 10ನೆ ವರ್ಷದ ಇಫ್ತಾರ್ ಕೂಟ

ಮಂಗಳೂರು: ಕರ್ನಾಟಕ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜಾರವರ ನೇತೃತ್ವದಲ್ಲಿ ಮಾರ್ಚ್ 23ರಂದು ಮಂಗಳೂರಿನ ಪಂಪ್‌ವೆಲ್ ಬಳಿ ಫಾ. ಮುಲ್ಲರ್ ಕನ್ವೆಂಶನ್ ಸಭಾಂಗಣದಲ್ಲಿ 10ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ ಆಚರಣೆ -2025 ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಐವನ್ ಡಿ ಸೋಜ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಳೆದ 9 ವರ್ಷ ಗಳಿಂದ ಸರ್ವ ಧರ್ಮದ ಹಬ್ಬವಾದ ದೀಪಾವಳಿ ಕ್ರಿಸ್ಮಸ್ ಹಾಗೂ ರಂಝಾನ್ ಅನ್ನು ಸಾರ್ವಜನಿಕವಾಗಿ ಆಚರಣೆ ಮಾಡಿಕೊಳ್ಳುತ್ತಿರುವ ವಿಧಾನ ಪರಿಷತ್ ಶಾಸಕ ಐವನ್ ಡಿ'ಸೋಜಾರವರ ನೇತೃತ್ವದಲ್ಲಿ ರಂಝಾನ್ ತಿಂಗಳ ಪ್ರಯುಕ್ತ 10ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ ಆಚರಣೆ ಮಾ.23 ರಂದು ಸಂಜೆ ಮಂಗಳೂರಿನ ಪಂಪ್‌ವೆಲ್ ಬಳಿ ಫಾಧರ್ ಮುಲ್ಲರ್ ಕನ್ವೆನ್ಷನ್ ಸಭಾಂಗಣದಲ್ಲಿ ಸರ್ವಧರ್ಮಗಳ ಸೌಹಾರ್ದ ಇಫ್ತಾರ್ ಕೂಟ ಹಮ್ಮಿಕೊಳ್ಳಲಾಗಿದೆ.
ಗೌರವಾನ್ವಿತ ಅತಿಥಿಗಳಾಗಿ ಶ್ರೀ ಈಶವಿಠಲದಾಸ ಸ್ವಾಮೀಜಿ ಸಾಂದೀಪನಿ ಶ್ರೀ ಕ್ಷೇತ್ರ ಕೇಮಾರು ಮಠ ಮೂಡಬಿದ್ರೆ, ಕೆ.ಪಿ. ಮಹಮ್ಮದ್ ಇಸಾಕ್ ಚಾರ್ಟೆಡ್ ಅಕೌಂಟೆಂಟ್ ಅಧ್ಯಕ್ಷರು ಜಮಾತ ಇಸ್ಲಾಮಿ ಹಿಂದ್ ಮಂಗಳೂರು, ಸೈಂಟ್ ಅಲೋಷಿಯಸ್ ಡೀಮ್ ಯುನಿರ್ವಸಿಟಿಯ ಉಪಕುಲಪತಿ ರೆ. ಡಾ| ಪ್ರವೀಣ್ ಮಾರ್ಟಿಸ್ ಎಸ್.ಜಿ. ಶುಭ ಸಂದೇಶ ನೀಡಲಿರುವರು .
ಈ ಸಮಾರಂಭದಲ್ಲಿ ರಾಜಕೀಯ ಪಕ್ಷದ ನೇತಾರರು. ಸಾಮಾಜಿಕ ಮತ್ತು ಶೈಕ್ಷಣಿಕ ಆಡಳಿತ ವಿಭಾಗದ ಗಣ್ಯರು. ಹಿತಚಿಂತಕರು ಭಾಗವಹಿಸಲಿರುವರು. ಈ ಸಮಾರಂಭದಲ್ಲಿ ಭಾಗವಹಿಸುದೊಂದಿಗೆ ಇಫ್ತಾರ್ ಕೂಟದ ಸಹಭೋಜನ ಏರ್ಪಡಿಸಲಾಗುವುದು ಎಂದವರು ತಿಳಿಸಿದ್ದಾರೆ.