ರಹ್ಮಾನಿಯಾ ಜುಮಾ ಮಸೀದಿ ಪೇಟೆ ವಠಾರದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಉಳ್ಳಾಲ : ರಹ್ಮಾನಿಯಾ ಜುಮಾ ಮಸೀದಿ ಮತ್ತು ಬುಸ್ತಾನುಲ್ ಉಲೂಮ್ ಮದರಸ ಪೇಟೆ ಉಳ್ಳಾಲ ವತಿಯಿಂದ ಮಸೀದಿ ವಠಾರದಲ್ಲಿ ಭಾರತದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.
ಉಳ್ಳಾಲ ಸೈಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು. ಏಚ್ ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಸಂದೇಶ ನೀಡಿದರು.
ರಹ್ಮಾನಿಯಾ ಜುಮಾ ಮಸೀದಿ ಅಧ್ಯಕ್ಷ ಹಾಜಿ ಮುಹಿಯುದ್ದೀನ್ ಹಸನ್ ಅವರು ಮಾತನಾಡಿ, ಇಸ್ಲಾಂ ಧರ್ಮವನ್ನು ನಿಜವಾಗಿಯೂ ಪ್ರೀತಿಸಲು ಒಬ್ಬ ವ್ಯಕ್ತಿಯು ತನ್ನ ರಾಷ್ಟ್ರವನ್ನು ಪ್ರೀತಿಸುವ ಅಗತ್ಯವಿದೆ. ದೇಶ ಪ್ರೇಮವು ಇಸ್ಲಾಮಿನ ಭಾಗವಾಗಿದೆ ಎಂದು ಹೇಳಿದರು.
ಪೇಟೆ ಜುಮಾ ಮಸೀದಿ ಖತೀಬ್ ಇಬ್ರಾಹಿಂ ಮದನಿ ಅವರು ದುವಾ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಪೇಟೆ ಜುಮಾ ಮಸೀದಿಯಲ್ಲಿ 5 ಆಕ್ಸಿಜನ್ ಸಿಲಿಂಡರ್ ಮತ್ತು ವೀಲ್ ಚೇರ್ ಉದ್ಘಾಟನೆ ಮಾಡಲಾಯಿತು.
ಪೇಟೆ ಜುಮಾ ಮಸೀದಿ ಉಪಾಧ್ಯಕ್ಷ ನಝೀರ್ ಕರಾವಳಿ, ಸದಸ್ಯ ಶರೀಫ್, ಶರಾಫತ್, ಅಜೀಮ್ ಬಸ್ತಿಪಡ್ಫು, ಸದರ್ ಅಶ್ರಫ್ ಸಹದಿ, ಶರೀಫ್ ಮದನಿ, ನಾಸೀರ್ ಮುಸ್ಲಿಯಾರ್, ಬುಸ್ತಾನುಲ್ ಉಲೂಮ್ ಯೂತ್ ಸಂಸ್ಥೆ ಅಧ್ಯಕ್ಷ ಫಯಾಜ್ ಕೊಟ್ಟಾರ ಮುಂತಾದವರು ಉಪಸ್ಥಿತರಿದ್ದರು
ಪೇಟೆ ಜುಮಾ ಮಸೀದಿ ಜೊತೆ ಕಾರ್ಯದರ್ಶಿ ತೌಸಿಫ್ ಕಾರ್ಯಕ್ರಮ ನಿರೂಪಣೆ ಮಾಡಿ ವಂದಿಸಿದರು.
