ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೆಸ್ಟೀಜ್ ಪದವಿ ಪೂರ್ವ ಕಾಲೇಜು ವತಿಯಿಂದ ಅಭಿನಂದನಾ ಕಾರ್ಯಕ್ರಮ

Update: 2023-09-25 14:29 GMT

ಮಂಗಳೂರು : ಅತ್ಯುತ್ತಮ ಅಂಕ ಪಡೆದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಪ್ರೆಸ್ಟೀಜ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಪ್ರೆಸ್ಟೀಜ್ ಕಾಲೇಜ್ ಆಡಳಿತ ಮಂಡಳಿ ಮತ್ತು ಕಾಲೇಜು ಸಿಬ್ಬಂದಿ ವರ್ಗದವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮತ್ತು ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಹಾಗೂ ಮೌಲ್ಯಮಾಪನ ಇಲಾಖೆಯ ಉಪನಿರ್ದೇಶಕರಾದ ಸಿ.ಡಿ ಜಯಣ್ಣ ಭಾಗವಹಿಸಿದ್ದರು.

ಮಾರ್ಚ್ 2022 - 2023ರ ಸಾಲಿನಲ್ಲಿ ಪದವಿ ಪೂರ್ವ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕ ಪಡೆದ ಪ್ರೆಸ್ಟೀಜ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಒಟ್ಟು 16 ವಿದ್ಯಾರ್ಥಿಗಳ ಪೈಕಿ ಶೇಕಡಾ 98 ಅಂಕಗಳಿಸಿದ ತನಿಷ್ಕ ಮೈಮುನಾ ಅವರನ್ನು ಎಲ್ಲಾ ಅತಿಥಿ ಅಭ್ಯಾಗತರು ಶಾಲು ಹೊದಿಸಿ ಸನ್ಮಾನಿಸಿದರು.

ಅನುಪಮ್ ಅಗರ್ವಾಲ್ ಅವರು ತಮ್ಮ ಅತಿಥಿಗಳ ಮುಖ್ಯ ಭಾಷಣದಲ್ಲಿ ಶಿಕ್ಷಣದ ಪ್ರಾಮುಖ್ಯತೆ, ವಿದ್ಯಾರ್ಥಿಗಳು ಸಾಮಾಜಿಕ ಮಾಧ್ಯಮವನ್ನು ಬಳಸುವ ರೀತಿ ಹಾಗೂ ತಂಬಾಕು ಮತ್ತು ಮಾದಕ ವ್ಯಸನಗಳಿಂದ ಮುಕ್ತರಾಗಿರಬೇಕೆಂದು ತಿಳಿ ಹೇಳಿದರು.

ಗೌರವಾನ್ವಿತ ಅತಿಥಿಗಳಾದ ಸಿ.ಡಿ ಜಯಣ್ಣ ರವರು ತಮ್ಮ ಭಾಷಣದಲ್ಲಿ ಈ ಕಾರ್ಯಕ್ರಮದಿಂದ ಪ್ರೇರಿತರಾಗಿ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಸ್ಥಾನ ಪಡೆದು ಕಾಲೇಜಿನ ಗೌರವವನ್ನು ಹೆಚ್ಚಿಸಬೇಕಾಗಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಮುಖ್ಯ ಅತಿಥಿ ಹಾಗೂ ಗೌರವಾನ್ವಿತ ಅತಿಥಿಗಳನ್ನು ಪ್ರೆಸ್ಟೀಜ್ ಕಾಲೇಜು ಆಡಳಿತ ಮಂಡಳಿ ಮತ್ತು ಪ್ರಾಂಶುಪಾಲರು ಅಭಿನಂದಿಸಿದರು.

ಪ್ರೆಸ್ಟೀಜ್ ಸಂಸ್ಥೆಯ ಚೇರ್ಮನ್ ಹೈದರ್ ಅಲಿ, ವ್ಯವಸ್ಥಾಪಕ ನಿರ್ದೇಶಕರಾದ ರೇಷ್ಮಾ ಹೈದರ್, ಪ್ರೆಸ್ಟೀಜ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿಂಧು ಸೇದು ಹಾಗೂ ಪ್ರೆಸ್ಟೀಜ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಫಿರೋಝಾ ಫಯಾಝ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.










 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News