ಶತಾಯುಷಿ ವಿದ್ವಾನ್ ಅಂಗಡಿ ಮಾರು ಕೃಷ್ಣಭಟ್ ನಿಧನ

Update: 2023-11-06 07:43 GMT

ಉಡುಪಿ: ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಪೂರ್ವಾಶ್ರಮದ ತೀರ್ಥರೂಪರೂ , ಹಿರಿಯ ಸಂಸ್ಕೃತ ಮತ್ತು ತುಳು ಭಾಷಾ ವಿದ್ವಾಂಸರೂ ಆದ ಅಂಗಡಿಮಾರು ಕೃಷ್ಣ ಭಟ್ಟರು ಭಾನುವಾರ ರಾತ್ರಿ ವಯೋಸಹಜ  ಖಾಯಿಲೆದಿಂದ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ .

ಅವರಿಗೆ 103 ವರ್ಷ ವಯಸ್ಸಾಗಿತ್ತು. ತುಳು ಭಾಷೆಯ ಸೌರ ಪಂಚಾಂಗವನ್ನು ಅತ್ಯಂತ ಶ್ರದ್ಧೆಯಿಂದ ಅನೇಕ ವರ್ಷಗಳಿಂದ ರಚಿಸಿ ಪ್ರಕಟಿಸುತ್ತಿದ್ದರು . ಸಂಪ್ರದಾಯ ನಿಷ್ಠರೂ ದೈವಭಕ್ತರೂ ಆಗಿದ್ದ ಅವರಿಗೆ ಮಂಗಳೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಹಿತ ಅನೇಕ ಮಠಾಧೀಶರು ಸಂಘ ಸಂಸ್ಥೆಗಳಿಂದ ಗೌರವ ಪುರಸ್ಕಾರಗಳು ಸಂದಿವೆ.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ದಾಖಲೆಯ ಐದನೇ ಪರ್ಯಾಯ ಪೀಠಾರೋಹಣ ಸಂದರ್ಭದಲ್ಲಿ ಕೃಷ್ಣ ಭಟ್ಟರನ್ನು ಮಠದ ವತಿಯಿಂದ ಸನ್ಮಾನಿಸಲಾಗಿತ್ತು.

ಭಟ್ಟರು ಏಳುಮಂದಿ ಪುತ್ರಿಯರನ್ನು ಮತ್ತು ಐವರು ಪುತ್ರರನ್ನು, ಅಪಾರ ಬಂಧುವರ್ಗವನ್ನು ಅಗಲಿದ್ದಾರೆ.‌



 


 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News